ನವದೆಹಲಿ :–
ಭಾರತ ದೇಶದ ರಾಷ್ಟ್ರಪತಿ ದೌಪದಿ ಮುರ್ಮು ಗುರುವಾರ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕ ಮಾಡಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇಮಕಾತಿ ನವೆಂಬರ್ ೨೪ ರಿಂದ ಜಾರಿಗೆ ಬರಲಿದ್ದು, ಅವರು ಫೆಬ್ರವರಿ ೯, ೨೦೨೭ ರವರೆಗೆ ಅಧಿಕಾರದಲ್ಲಿರುತ್ತಾರೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇದನ್ನು ಘೋಷಿಸಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಶುಭಹಾರೈಸಿದ್ದಾರೆ.
ಪ್ರಸ್ತುತ ಸಿಜೆಐ ಬಿ.ಆರ್.ಗವಾಯಿ ನ.೨೩ ರಂದು ನಿವೃತ್ತರಾಗಲಿದ್ದಾರೆ.





