ಚಿಕ್ಕೋಡಿ :–
ಶಿಕ್ಷಣದೊಂದಿಗೆ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯವಶ್ಯಕ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಂ. ಟಿ. ಕುರಣಿ ಹೇಳಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಹಾಕಿ ಮತ್ತು ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಗುರುವಾರ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಅವರು ಕ್ರೀಡೆ ಜೀವನದ ಬಹುಮುಖ್ಯ ಭಾಗವಾಗುತ್ತಿದೆ.
ಭಾರತ ಇಂದು ಅಂತರಾಷ್ಟ್ರೀಯ ಮಟ್ಟದ ಎಲ್ಲಾ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ದೇಶದ ಹೆಸರನ್ನು ಉಜ್ವಲ ಗೊಳಿಸುತ್ತಿದೆ. ಸರ್ಕಾರ ಕ್ರೀಡೆಗೆ ಪ್ರೋತ್ಸಾಹ,ಸಾಕಷ್ಟು ಅನುದಾನವನ್ನು ನೀಡುತ್ತದೆ, ವಿದ್ಯಾರ್ಥಿಗಳು ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ. ಎಲ್. ಇ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಪಾಟೀಲ ಮಾತನಾಡಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಾಕಷ್ಟು ಅನುದಾನ ಮತ್ತು ಸೂಕ್ತ ತರಬೇತಿ ನೀಡುವುದರ ಮುಖಾಂತರ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆಗೈಯಲು ಶ್ರಮಿಸಬೇಕು. ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಕಬಡ್ಡಿ , ಮಲ್ಲಕಂಬ, ಹಾಕಿ, ಕೋಕೋ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿಪೂರ್ವ ಪ್ರಾಚಾರ್ಯ ಪ್ರೊ. ಪ್ರಕಾಶ ಕೋಳಿ ಸ್ಪರ್ಧೆಗಳಲ್ಲಿ ಸೋಲು ಮತ್ತು ಗೆಲುವು ಸಹಜ ವಿನಮ್ರತೆಯಿಂದ ಎರಡನ್ನು ಸ್ವೀಕರಿಸಿ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದರು.
ಪದವಿ ಪ್ರಾಚಾರ್ಯ ಡಾ. ಬಿ. ಜಿ. ಕುಲಕರ್ಣಿ, ಉಪ ಪ್ರಾಚಾರ್ಯ ಸುಧೀರ ಕೋಟಿವಾಲೆ, ಕ್ರೀಡಾ ಪರಿವೀಕ್ಷಕ ಎಸ್ ಎಸ್ ಸನದಿ, ಜಿಲ್ಲಾ ಕ್ರೀಡಾ ಸಂಯೋಜಕ ಅಜಯ ಮೋನೆ, ತಾಲೂಕು ಕ್ರೀಡಾ ಸಂಯೋಜಕ ವಾಯ್. ಬಿ. ಮಾಚಕನೂರ , ದೈಹಿಕ ನಿರ್ದೇಶಕ ಪ್ರವೀಣ ವಾಘಮೋರೆ ಸೇರಿದಂತೆ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪ್ರೊ. ಎಂ ಎಂ ಪಾಟೀಲ ನಿರೂಪಿಸಿದರು.ಪ್ರೊ. ಎಸ್ ಈ ಅವರಾದಿ ಸ್ವಾಗತಿಸಿದರೆ, ತಿಪ್ಪಣ್ಣಾ ಖೋತ ವಂದಿಸಿದರು.
ಪ್ರೊ. ಮಹೇಶ ಮದಬಾಂವಿ, ಪ್ರೊ. ಆರ್ ಎಸ್ ಮಿನಚೆ,
ಪ್ರೊ. ವಿಶಾಲ ಕೋಲೆ, ಪ್ರೊ. ಪಿ ಬಿ ಪಾಟೀಲ, ಪ್ರೊ. ಮಲ್ಲಿಕಾರ್ಜುನ್ ಜರಳಿ, ಪ್ರೊ. ಸಿದ್ದಣ್ಣ ನಾಯಕ, ಪ್ರೊ. ಸುಷ್ಮಾ ಜಮದಾಡೆ, ಪ್ರೊ. ಪ್ರಜ್ಞಾ ಬಾಗೆವಾಡಿ,ಪ್ರೊ. ಸುಪ್ರಿಯಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.





