“ವಿದ್ಯಾರ್ಥಿಗಳಿಗೆ ಹ್ಯಾಂಡ್ ಆನ್‌ಟ್ರೇನಿಂಗ್ ಆನ್ ಹಾಮ್ ರೇಡಿಯೋ ಆಪರೇಷನ್ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ”

ಚಿಕ್ಕೋಡಿ :–

ರೇಡಿಯೋ ಮಾದ್ಯಮ ಜಗತ್ತಿನ ಮೂಲೆ ಮೂಲೆಯಿಂದ ಮಾಹಿತಿ ಸಂಗ್ರಹಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಲು ತಂತ್ರಜ್ಞಾನ ಅವಿಷ್ಕಾರವಾಗಿ ಮಹತ್ವ ಪಡೆದುಕೊಂಡಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ.ಹೆಗಡೆ ಹೇಳಿದರು .

ಪಟ್ಟಣದ ಕೆ ಎಲ್ ಈ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಭೌತ ಶಾಸ್ತ್ರ ವಿಭಾಗ, ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹ್ಯಾಂಡ್ ಆನ್‌ಟ್ರೇನಿಂಗ್ ಆನ್ ಹಾಮ್ ರೇಡಿಯೋ ಆಪರೇಷನ್ ಕುರಿತ ಗುರುವಾರ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತರಗತಿ, ಶಿಕ್ಷಣ ಜೊತೆಗೆ ಪ್ರಾಯೋಗಿಕ ಜ್ಞಾನ ಪಡೆಯಲು ವಿದ್ಯಾರ್ಥಿಗಳು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಮಾಹಿತಿಯನ್ನು ತುರ್ತು ಸಂದರ್ಭಗಳಾದ ಸುನಾಮಿ, ಭೂಕಂಪ, ಪ್ರಕೃತಿ ವಿಕೋಪಗಳು ಸೇರಿದಂತೆ ಗಂಭೀರ ವಿಚಾರಗಳ ಮಾಹಿತಿ ತಲುಪಿಸಲು ಹಾಗು ಜನರಿಗೆ ಎಚ್ಚೆತ್ತು ಕೊಳ್ಳಲು ರೇಡಿಯೋ ತಂತ್ರಜ್ಙಾನ ಸುಲಭ ಮಾದ್ಯಮವಾಗಿದೆ ಎಂದು ಹೇಳಿದರು.

ಶಿವಾಜಿ ವಿಶ್ವವಿದ್ಯಾಲಯ ಕೋಲ್ಹಾಪುರದ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಪ್ರೊಫೆಸರ ಪ್ರಮೋದ ವಸಂಬೇಕರ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ ಭಾರತದ ಪ್ರಸಿದ್ಧ ನೊಬೆಲ್ ವಿಜ್ಞಾನಿ ಜಗದೀಶಚಂದ್ರ ಬೋಸ್ ರೇಡಿಯೋ ಕ್ಷೇತ್ರದಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗ ವಿಷಯದಲ್ಲಿ ಮಾಡಿದ ಅಪಾರ ಅನ್ವೇಷಣೆ ಮತ್ತು ಅಭಿವೃದ್ಧಿ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಮಾಡಿದೆ. ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾಗಿದ್ದಾರೆ ಎಂದರು.

ಅಖಿಲ ಭಾರತೀಯ ರೇಡಿಯೋ ನಿವೃತ್ತ ಇಂಜಿನಿಯರ್ ಮಂಜುನಾಥ್ ಶಿಂದೆ ಹ್ಯಾಮ್ ರೇಡಿಯೋ ನಿರ್ವಹಣೆ,ದಕ್ಷತೆ, ವಯರ್ಲೆಸ್ ತಂತ್ರಜ್ಞಾನ ಕಾರ್ಯವೈಖರಿ ಪ್ರಾಯೋಗಿಕವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿದರು.

ಕಾರ್ಯಾಗಾರದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದರು. ಡಾ.ಸಿದ್ಧಲಿಂಗ ಮಟ್ಟೆಪನವರ ಸ್ವಾಗತಿಸಿದರು. ಜಿಯಾ ಮುಲ್ಲಾ, ಲಕ್ಷ್ಮಿಕೊಕಟನೂರ ನಿರೂಪಿಸಿದರು. ವಿಭಾಗದ ಮುಖ್ಯಸ್ಥ ಡಾ.ರಾಮಣ್ಣ ವಂದಿಸಿದರು.

ಉಪ ಪ್ರಾಚಾರ್ಯ ಡಾ. ಸುಧೀರ ಕೋಟಿವಾಲೆ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page