ಚಿಕ್ಕೋಡಿ :–
ನಗರದ ಪ್ರತಿಷ್ಠಿತ ಕೆ. ಎಲ್. ಇ ಸಂಸ್ಥೆಯ ಚಿದಾನಂದ ಬಿ. ಕೋರೆ ಪಾಲಿಟೆಕ್ನಿಕ್ ಕಾಲೇಜಿನಲಿ, ದಿನಾಂಕ ೩೧-೧೦-೨೦೨೫ ರಂದು ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ವಿವಿಧ ಡಿಪ್ಲೊಮಾ ಕಾಲೇಜುಗಳ ಸುಮಾರು ೧೨೦ ವಿದ್ಯಾರ್ಥಿಗಳು ಭಾಗವಹಿಸಿದ್ದು, ೭೭ ವಿದ್ಯಾರ್ಥಿಗಳು ವಾರ್ಷಿಕ ಪ್ಯಾಕೇಜ್ ರೂ. ೩.೨೭ ಲಕ್ಷದೊಂದಿಗೆ ‘ಟೊಯೋಟಾ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು’ ಕಂಪನಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯರಾದ ಡಾ|| ದರ್ಶನಕುಮಾರ ಬಿಳ್ಳೂರ ರವರು ತಿಳಿಸಿದ್ದಾರೆ.

ವಿದ್ಯಾಲಯದ ತರಬೇತಿ ಹಾಗೂ ನೇಮಕಾತಿ ವಿಭಾಗದ ಮುಖ್ಯಸ್ಥರಾದ ಪ್ರೊ. ವಿವೇಕ್‌ಖೋತ ಇತರರು ಇದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸ್ಥಾನಿಕ ಆಡಳಿತ ಮಂಡಳಿ ಮತ್ತು ಕೆ. ಎಲ್. ಇ ಸಂಸ್ಥೆಯ ಕಾರ್ಯಾಧಕ್ಷರಾದ ಡಾ|| ಪ್ರಭಾಕರ ಕೊರೆಯವರು ಶುಭ ಕೋರಿದ್ದಾರೆ.





