ಬೆಳಗಾವಿ :–
“ಬೆಳಗಾವಿಯಲ್ಲಿ ಪ್ರತಿಭಟನಾನಿರತ ರೈತರ ಜತೆ ಸಚಿವ ಎಚ್.ಕೆ.ಪಾಟೀಲ್ ಮಾತುಕತೆ ವಿಫಲವಾಯಿತು”
ಕಬ್ಬು ಬೆಲೆ ನಿಗದಿಗಾಗಿ ಗೋಕಾಕ ತಾಲೂಕಿನ ಗುರ್ಲಾಪೂರದಲ್ಲಿ ನಡೆಯುತ್ತಿರುವ ಪ್ರತಿಭಟನಾನಿರತ ರೈತ ಮುಖಂಡರೊಂದಿಗಿನ ಸಚಿವ ಎಚ್.ಕೆ.ಪಾಟೀಲ್ ಮಾತುಕತೆ ವಿಫಲವಾಗಿದೆ.
ಈ ವೇಳೆ ಮಾತನಾಡಿದ ಸಚಿವರು, ಬೆಂಗಳೂರಿಗೆ ಬನ್ನಿ ಸಿಎಂ ಜತೆ ಮಾತನಾಡುವ. ನವೆಂಬರ್ ೭ ರ ೨ ಗಂಟೆ ಒಳಗೆ ನಿಮ್ಮ ಬೇಡಿಕೆಗೆ ಸರ್ಕಾರ ಪರಿಹಾರ ನೀಡುತ್ತದೆ ಎಂದು ರೈತರಿಗೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ರೈತರು, ನಾವು ಬೆಂಗಳೂರಿಗೆ ಬರುವುದಿಲ್ಲ, ನಮ್ಮ ಪರವಾಗಿ ಡಿಸಿ-ಎಸ್‌ಪಿ ಯನ್ನು ಕರೆದು ನಿರ್ಧಾರ ಅಂತಿಮಗೊಳಿಸಿ ಎಂದರು.





