ಚುನಾವಣಾ ಆಯೋಗದ ಪ್ರಕಾರ, ಒಬ್ಬ ಅಭ್ಯರ್ಥಿಯು ಆ ಕ್ಷೇತ್ರಕ್ಕೆ ಚಲಾವಣೆಯಾದ ಒಟ್ಟು ಮತಗಳಲ್ಲಿ ೧/೬ ನೇ ಭಾಗ ಅಥವಾ ೧೬.೬೬% ರಷ್ಟು ಮತಗಳನ್ನು ಪಡೆಯಲು ವಿಫಲವಾದರೆ,
ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಲು, ಒಬ್ಬ ಅಭ್ಯರ್ಥಿಯು ಚುನಾವಣಾ ಆಯೋಗದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಠೇವಣಿ ಇಡಬೇಕು, ಅದು ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತದೆ.





