ಪುತ್ರರು( ಮಕ್ಕಳು) ಈಗ ಪೋಷಕರನ್ನು ತೀರ್ಥಯಾತ್ರೆಗೆ ಕರೆದೊಯ್ಯುವ ಬದಲು ನ್ಯಾಯಾಲಯಗಳಿಗೆ ಕರೆದೊಯ್ಯುತ್ತಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ತನ್ನ ಹೆತ್ತವರ ವಿರುದ್ಧ ತಡೆಯಾಜ್ಞೆ ಕೋರಿದ ಒಬ್ಬ ವ್ಯಕ್ತಿಗೆ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿದೆ. ನಮ್ಮ ನೈತಿಕ ಮೌಲ್ಯಗಳು ತುಂಬಾ ಕುಸಿದಿವೆ, ತನ್ನ ಹೆತ್ತವರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿ ಅವರಿಗಾಗಿ ತನ್ನ ಪ್ರಾಣವನ್ನೇ ಕೊಟ್ಟ ಶ್ರವಣ ಕುಮಾರನನ್ನು ನಾವು ಮರೆತಿದ್ದೇವೆ ಎಂದು ನ್ಯಾಯಾಲಯ ತಿಳಿಸಿದೆ.





