ಆರ್‌ಎಂಎಲ್ ಆಸ್ಪತ್ರೆಯ ಡಾ.ಸುಭಾಷ್ ಗಿರಿ, ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಬಹುದು ಎಂದು ಹೇಳಿದರು.
ನಿಯಮಿತವಾಗಿ ವ್ಯಾಯಾಮ ಮಾಡಬೇಕು.ಯೋಗ, ನಡಿಗೆ, ನೃತ್ಯ ಅಥವಾ ಯಾವುದೇ “ಲಘು ದೈಹಿಕ” ಚಟುವಟಿಕೆಯು ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
೧೫ – ೨೦ ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ನೈಸರ್ಗಿಕವಾಗಿ ಸಿರೊಟೋನಿನ್ ಹೆಚ್ಚಾಗುತ್ತದೆ ಹಾಗೂ ಮನಸ್ಥಿತಿ ಸುಧಾರಿಸುತ್ತದೆ ಎಂದು ಅವರು ತಿಳಿಸಿದರು.





