ಬೆಂಗಳೂರು :–
ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಪ್ರತಿಕ್ರಿಯೆಯಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ,
ಉಪಾಹಾರ ಸಭೆ ಎನ್ನುವುದಕ್ಕಿಂತ ಎರಡು ಬಣಗಳ ಕಮಾಂಡರ್‌ಗಳ ನಡುವಿನ ಕದನ ವಿರಾಮ ಸಭೆಯಂತೆ ಕಾಣಿಸಿತು ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ, ಶಿವಕುಮಾರ್ ಅವರ ಬಹುನಿರೀಕ್ಷತ ಬೆಳಗಿನ ಉಪಾಹಾರ ಶೃಂಗಸಭೆ ಜರುಗಿದೆ. ಆದರೆ, ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಗೊಂದಲಗಳಿಗೆ ಅವರು ಮಾಧ್ಯಮಗಳನ್ನು ದೂಷಿಸಿರುವುದು ಹಾಸ್ಯಾಸ್ಪ ಎಂದು ಹೇಳಿದರು.





