ದಿನವಿಡೀ ನಿಮ್ಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಉಪಹಾರ ಅತ್ಯಗತ್ಯವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಹಾಗೂ ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಖ್ಯಾತ ವೈದ್ಯ ವಿ.ಚಂದ್ರಶೇಖರನ್ ಪ್ರಕಾರ ಬೆಳಗಿನ ವೇಳೆ ಸಾಮಾನ್ಯ ನಾಲ್ಕು ತಪ್ಪುಗಳು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಕರವಾಗಿದೆ. ಅವುಗಳೆಂದರೆ, ಉಪಹಾರ ಮಾಡದಿರುವುದು, ಸಂಸ್ಕರಿಸಿದ ಆಹಾರ ಸೇವನೆ, ಹೆಚ್ಚು ಸಕ್ಕರೆಯುಕ್ತ ಆಹಾರ ಸೇವನೆ, ಸಂಸ್ಕರಿಸಿದ ಮಾಂಸ ಸೇವನೆಯಿಂದ.





