ಬೆಂಗಳೂರು :–
ಛತ್ರಪತಿ ಶಿವಾಜಿ ಮಹಾರಾಜ ಅವರು ಜಗತ್ತಿನ ಅತಿದೊಡ್ಡ ಸೆಕ್ಯುಲರ್ ನಾಯಕರಾಗಿದ್ದರು ಎಂದು ಬೀದರ್‌ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಜಿಲ್ಲಾಮಟ್ಟದ ಮರಾಠ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಮೊಘಲರ ವಿರುದ್ಧ ಹೋರಾಡಿದರು ಹೊರತು,
ಮುಸ್ಲಿಮರ ವಿರುದ್ಧ ಅಲ್ಲ. ಇದನ್ನು ಮರಾಠಿಗರು ಅರಿತುಕೊಳ್ಳಬೇಕು. ಶಿವಾಜಿ ಅವರ ಸಮಾಧಿ ಪತ್ತೆ ಹಚ್ಚಿದ್ದು ಜ್ಯೋತಿಬಾ ಫುಲೆ ಎಂದು ಹೇಳಿದರು.





