ನೆಲ್ಲಿಕಾಯಿಯನ್ನು ಆವಿಯಲ್ಲಿ ಬೇಯಿಸುವುದರಿಂದ ವಿಟಮಿನ್ ಸಿ ಸಂರಕ್ಷಸಲ್ಪಡುತ್ತದೆ, ಇದು ರೋಗನಿರೋಧಕ ಶಕ್ತಿ ಸುಧಾರಿಸುವ, ಚರ್ಮದ ಆರೋಗ್ಯ ಬೆಂಬಲಿಸುವ, ಕೂದಲಿನ ರಚನೆ ಸುಧಾರಿಸುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ ಎಂದು ಕ್ಲಿನಿಕಲ್ ಪೌಷ್ಟಿಕತಜ್ಞೆ ಕಾವ್ಯ ನಾಯ್ಡು ಹೇಳಿದ್ದಾರೆ.
ಪ್ರತಿದಿನ ಒಂದು ನೆಲ್ಲಿಕಾಯಿ ಸೇವಿಸುವುದರಿಂದ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ನಾಯ್ಡು ತಿಳಿಸಿದ್ದಾರೆ.





