ಚಿಕ್ಕೋಡಿ :–
ಮೂರು ದಶಕಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಬೇಕೆಂದು ನಡೆದ ಹೋರಾಟ ಬಸವೇಶ್ವರ ಸರ್ಕಲ್ ದಲ್ಲಿ ಧರಣಿ ಸತ್ಯಾಗ್ರಹ..
ಬಹು ದಶಕಗಳ ಬೇಡಿಕೆಯಾದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಈ ಛಳಿಗಾಲ ಅಧಿವೇಶನದ ಸಮಯದಲ್ಲಿ, ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಅಧಿವೇಶನದ ಮೊದಲನೇ ದಿನವಾದ ಇಂದು ಆರಂಭವಾಗಿದೆ, ನೂರಾರು ಜನರು ಧರಣಿಯಲ್ಲಿ ಭಾಗವಹಿಸಿ ಈ ಛಳಿಗಾಕ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷನೆ ಆಗಬೇಕೆಂದು ಒತ್ತಾಯಿಸಿದರು, ಚಂದ್ರಶೇಖರ ಅರಭಾವಿ ಗುರುಗಳು ಮಾತನಾಡಿ ಹೋರಾಟಗಾರರ ದಶಕಗಳ ಕಟ್ಟೆ ಒಡೆದಿದೆ, ಅಧಿವೇಶದ ಸದನದ ಒಳಗೆ ಮತ್ತು ಹೊರಗೆ ಜನಪ್ರತಿನಿಧಿಗಳು ಹೋರಾಟ ಮಾಡಿ, ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಿಸಬೇಕು, ಇದಕ್ಕೆ ತಪ್ಪಿದರೆ ಹೋರಾಟ ಉಘ್ರ ಸ್ವರೂಪತಾಳಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಹೋರಾಟಗಾರರಾದ ಸಂತೋಷ ಪೂಜೇರಿ, ಪ್ರತಾಪಗೌಡ ಪಾಟೀಲ, ಅನಿಲ ನಾವಿ, ಅಮೂಲ ನಾವಿ, ಅಪ್ಪಾಸಾಹೇಬ ಹಿರೇಕೋಡಿ, ರಮೇಶ ಪಾಟೀಲ, ಮೋಹನ ಪಾಟೀಲ, ಶಂಕರ ಅವಡಖಾನ, ಸರದಾರ ಪಟೇಲ, ಮಹಾವೀರ ಬಿಲ್ಲೂರೆ, ಸುನೀಲ ತೇರದಾಳೆ, ಮಲ್ಲಪ್ಪ ಡೋನವಾಡೆ, ಚಿದಾನಂದ ಶಿರೋಳೆ, ಕೇದಾರಿ ಬರ್ಗೆ, ಖಾನಪ್ಪಾ ಬಾಡ, ಶಿವಲಿಂಗ ವಗ್ಗೆ, ಭೀಮಾ ಶಿರಗಾವೆ, ರಫೀಕ ಪಠಾಣ, ಕೃಷ್ಣಾ ಶಿಂದೆ ಸೇರಿದಂತೆ ನೂರಾರು ಜನ ಹೋರಾಟಗಾರರು ಉಪಸ್ಥಿತರಿದ್ದರು..





