“ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಕೊಡಲಿದೆ : ಬೆಳಗಾವಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ

ಬೆಳಗಾವಿ :–

ರಾಜ್ಯ ಸರ್ಕಾರವು ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಕೊಡಲಿದೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ನಾವು ಆರ್ಥಿಕವಾಗಿ ಗಟ್ಟಿಯಾಗಿ ಇದ್ದೇವೆ, ಜಿಎಸ್‌ಟಿ ಕಲೆಕ್ಷನ್‌ನಲ್ಲಿ ಕೇಂದ್ರದವರು ಅರ್ಧ ಹಣ ಕೊಡಬೇಕು. ಅವರು ಕೊಡುವುದು 1 ತಿಂಗಳು, ಎರಡು ತಿಂಗಳು ತಡವಾಗುತ್ತೆ, ಹೀಗಾಗಿ ಹಣ ಹೊಂದಿಸುವುದು ತಡವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page