ಬೆಳಗಾವಿ :–
ಕರ್ನಾಟಕದ ಪ್ರತಿ ಕುಟುಂಬಕ್ಕೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ‘ಕರ್ನಾಟಕ ಕುಟುಂಬ (ಪ್ರವೇಶ ಮತ್ತು ನಿರ್ವಹಣೆ) ಮಸೂದೆ-2025’ ಅನ್ನು ರಾಜ್ಯ ಸರ್ಕಾರವು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ವರದಿ ಯಾಗಿದೆ.
ಸರ್ಕಾರದ ಎಲ್ಲಾ ಯೋಜನೆಗಳನ್ನು ಈ ಸಂಖ್ಯೆ ಆಧರಿಸಿ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ ಮತ್ತು ಇದರ ನಿರ್ವಹಣೆಗಾಗಿ ಸರ್ಕಾರವು ಕರ್ನಾಟಕ ಕುಟುಂಬ (ಪ್ರವೇಶ ಮತ್ತು ನಿರ್ವಹಣೆ) ಪ್ರಾಧಿಕಾರ ಸ್ಥಾಪಿಸಲಿದೆ ಎಂದು ವರದಿ ಹೇಳಿದೆ.





