ಬೇಗ ಋತುಮತಿಯಾಗುವ ಕಾರಣಕ್ಕೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ವೈದ್ಯರಾದ ಡಾ. ಮಾಲಿನಿ ಎಸ್. ಸುತ್ತೂರು ಹೇಳಿದರು.
ದೇಹಕ್ಕೆ ಹಾನಿಯಾಗುವ ಹಾನಿಕಾರಕ ಪ್ಲಾಸ್ಟಿಕ್ ಬಳಕೆ, ಕೆಲವೊಂದು ಆಹಾರದಲ್ಲಿರುವ ಅಂಶದಿಂದ ಸ್ತನ ಕ್ಯಾನ್ಸರ್ ಬರುತ್ತದೆ.
ದೈಹಿಕ, ಮಾನಸಿಕ ಒತ್ತಡದಿಂದ ಹಾರ್ಮೋನ್‌ಗಳು ಅಸಮತೋಲನ ಆಗಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಅಜ್ಜಿ, ತಾಯಿಗೆ ಸ್ತನ ಕ್ಯಾನ್ಸರ್ ಇದ್ದರೆ ಅದು ಮಕ್ಕಳಿಗೂ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.





