“ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುವ ಹೋರಾಟಗಾರರ ಮೇಲೆ, ಒಂದಿಷ್ಟು ಕನಿಕರ ಇಲ್ಲದ” : ಸರಕಾರ

ಚಿಕ್ಕೋಡಿ :–

ಪ್ರತ್ಯೇಕ ಜಿಲ್ಲೆ ಘೋಷಣೆಗಾಗಿ ನಿರಂತರ ನಡೆದ, ಧರಣಿ ಸತ್ಯಾಗ್ರಹ ಹನ್ನೊಂದನೆಯ ದಿನವನ್ನು ತಲುಪಿತು, ನಿವೃತ್ತ ಮುಖ್ಯ ಶಿಕ್ಷಕರಿಂದ ಬೆಂಬಲ…

ತಮ್ಮ ಮನೆ ಮಕ್ಕಳು ಕುಟುಂಬವನ್ನು ಬದಿಗಿಟ್ಟು ಯಾವುದೇ ಸ್ವಾರ್ಥ ಆಸೆ-ಆಕಾಂಕ್ಷೆಗಳಿಲ್ಲದೇ, ಮೂರು ದಶಕಗಳಿಂದ ಚಿಕ್ಕೋಡಿ “ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುವ ಹೋರಾಟಗಾರರ ಮೇಲೆ, ಒಂದಿಷ್ಟು ಕನಿಕರ ಇಲ್ಲದ ಸರಕಾರದ” ದೂರದೃಷ್ಟಿ ಅಹೋಮಯವಾಗಿದೆ. ಕೊನೆಗೊಮ್ಮೆ ಗೆಲ್ಲಲೇ ಬೇಕೆಂಬ ಹಠ ಇರುವ ಹೋರಾಟಗಾರರು ದಿನ ದಿನಕ್ಕೆ ಮುಂದೆಯೇ ಸಾಗುತ್ತಿದ್ದಾರೆ.

ಸದಲಗಾ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಡಾ.ಶಿಕ್ಷಕ ಹಾಗೂ ಪ್ರಶಸ್ತಿ ವಿಜೇತರು ಆದ ಪಿ.ಎಮ್.ಭೋಜೆ ಅವರು ತಮ್ಮ ಸಹಯೋಗಿಗಳೊಂದಿಗೆ, ಜಿಲ್ಲಾ ಹೋರಾಟ ವೇದಿಕೆಗೆ ಆಗಮಿಸಿ ಬೆಂಬಲ ಸೂಚಿಸಿದರು, ಹೋರಾಟದ ವಿಷಯವನ್ನು ಉದ್ಧೇಶಿಸಿ ಮಾತನಾಡಿದ ಅವರು, ನಮ್ಮ ಭಾಗದ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಸರಕಾರವನ್ನೇ ಉರುಳಿಸುವ ಹಾಗೂ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ, ಆದರೆ ಚಿಕ್ಕೋಡಿ ಜಿಲ್ಲೆ ಮಾಡುವ ವಿಷಯ ಚುಟುಕಿಯ ಕೆಲಸವಾಗಿದೆ, ಆದರೆ ಅವರೆಲ್ಲರು ತಮ್ಮ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ, ಸ್ವಾರ್ಥದಿಂದ ಹೊರ ಬಂದು ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡಲು ಒಮ್ಮತದಿಂದ ಪ್ರಯತ್ನಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಸದಲಗಾ ಪಟ್ಟಣದ ಹುಟ್ಟು ಹೋರಾಟಗಾರರು, ಸಹಕಾರಿ ಧುರೀಣರು ಹಾಗೂ ಶಿಕ್ಷಣ ಪ್ರೇಮಿಗಳು ಆದ ದರೆಪ್ಪಾ ಹವಾಲ್ದಾರ ಮಾತನಾಡಿ, ನಮ್ಮ ಭಾಗದ ಹಲವಾರು ಜನಪ್ರತಿನಿಧಿಗಳು ಸದನದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಧ್ವನಿ ಎತ್ತಿದರೂ ಕೂಡ, ಇಲ್ಲಿಯವರೆಗೆ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗಲಿಲ್ಲ, ನಮ್ಮ ಭಾಗದ ಜನರ ಬೇಡಿಕೆಗಳನ್ನು ಸರಕಾರವು ಯಾಕೆ ನಿರ್ಲಕ್ಷಿಸುತ್ತಿದೆ ಎಂಬುದೇ ತಿಳಿಯದ ವಿಷಯವಾಗಿದೆ, ಬೆಳಗಾವಿ ಜಿಲ್ಲೆಯ ವಿಭಜನೆ ಆಗದ ಹೊರತು ನಮ್ಮ ಭಾಗಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು.

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಹೋರಾಟಗಾರರು ಆದ ದರೆಪ್ಪಾ ಹವಾಲ್ದಾರ, ಚಂದ್ರಶೇಖರ ಅರಭಾಂವಿ, ಮನೋಜ ಶಿರಗಾಂವೆ, ಮಹಾದೇವ ಬರಗಾಲೆ, ಡಿ ಎ ಮಾನೆ, ದುಂಡಪ್ಪಾ ಚೌಗುಲೆ, ದುರದುಂಡಿ ಬಡಿಗೇರ, ಅಜ್ಜಪ್ಪಾ ವಗ್ಗೆ, ಹಾಲಪ್ಪಾ ದುಗ್ಗಾನೆ, ಚಿದಾನಂದ ಶಿರೋಳೆ, ಅಪ್ಪಾಸಾಬ ಹಿರೇಕೋಡಿ, ಭೀಮರಾವ್ ಮಡ್ಡೆ, ಸುರೇಶ ಕದ್ದಿ, ಪಿಂಟು ಹರಕೆ, ಸುಶಾಂತ ಬರಗಾಲೆ, ಸಚೀನ ಬರಗಾಲೆ ಸೇರಿದಂತೆ ನೂರಾರು ಜನ ಹೋರಾಟಗಾರರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page