ಸುವರ್ಣಸೌಧ ಬೆಳಗಾವಿ :–
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಮಕ್ಕಳ ಖಾತೆಗೆ ೧೦ ಲಕ್ಷ ರೂ. ನೀಡಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಒತ್ತಾಯಿಸಿದ ಪ್ರಸಂಗ ನಡೆಯಿತು.
ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದ ಅವರು, ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ. ಈ ಹಿನ್ನೆಲೆಯಲ್ಲಿ ತಾಲೂಕುವಾರು ಮಠಗಳನ್ನು ಸರ್ಕಾರ ನಿರ್ಮಿಸಲಿ ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಈಗಾಗಲೇ ಹೆಣ್ಣು ಸಿಗಲಿ ಎಂದು ಮಲೆಮಹದೇಶ್ವರ ಮತ್ತು ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದಾರೆ.
ಮದುವೆಯಾಗದ ರೈತರ ಮಕ್ಕಳಿಗಾಗಿ ಪ್ರೋತ್ಸಾಹ ಧನ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ಹಲವು ಸದಸ್ಯರು ಮೇಜುಕುಟ್ಟಿ ಪುಟ್ಟಣ್ಣ ಅವರಿಗೆ ಬೆಂಬಲ ಸೂಚಿಸಿದರು. ಈ ಸಮಯದಲ್ಲಿ ಸರ್ಕಾರದ ಪರ ಉತ್ತರ ನೀಡಿದ ಸಭಾನಾಯಕ ಬೋಸರಾಜ್, ಸದರಿ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರುವುದಾಗಿ ಎಂದು ಹೇಳಿದರು.





