ಪಂಜಾಬ್ ರಾಜ್ಯದ ಮೋಗಾದಲ್ಲಿ ಮಂಗಳವಾರ ಇಬ್ಬರು ದಾಳಿಕೋರರು ಮನೆಗೆ ನುಗ್ಗಿ ಕಾಂಗ್ರೆಸ್ ನಾಯಕ ನರೇಂದ್ರಪಾಲ್ ಸಿಂಗ್ ಸಿಧು ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕೆಲಸ ಮಾಡಿಸಿಕೊಳ್ಳುವ ನೆಪದಲ್ಲಿ ಮನೆಗೆ ದಾಳಿಕೋರರು ಬಂದಿದ್ದರು. ಜೀವ ಬೆದರಿಕೆ ಇರುವ ಹಿನ್ನೆಲೆ ಆರು ತಿಂಗಳಿನಿಂದ ಪೊಲೀಸ್ ಭದ್ರತೆ ಕೋರುತ್ತಿದ್ದರು ಎಂದು ಕಾಂಗ್ರೆಸ್ ನಯಕ ಧರಂಪಾಲ್ ತಿಳಿಸಿದ್ದಾರೆ.
ನರೇಂದ್ರಪಾಲ್ ಅವರ ಕಾಲು ಮತ್ತು ಭುಜಕ್ಕೆ ಗುಂಡು ಹಾರಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.





