“ಜೊಲ್ಲೆ ಗ್ರೂಪ್‌ನ ಪ್ರೇರಣಾ ಪುರಸ್ಕಾರಕ್ಕೆ ಭಾಜನರಾದ ದೆಹಲಿಯ ಚಯನೀತ ಫೌಂಡೇಶನ್ ವಿಶೇಷ ಚೇತನ ಮಕ್ಕಳು”

ಚಿಕ್ಕೋಡಿ :–

ತಾಲುಕಿನ ಯಕ್ಸಂಬಾ ಪಟ್ಟಣದ ನನದಿ ಕ್ಯಾಂಪಸ್‌ನಲ್ಲಿರುವ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ ಆವರಣದಲ್ಲಿ, ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಲಾಗಿರುವ 14 ನೇ ಪ್ರೇರಣಾ ಉತ್ಸವದ ಪ್ರೇರಣಾ ಪುರಸ್ಕಾರವನ್ನು ಚಯನೀತ ಫೌಂಡೇಶನ 5 ವಿಶೇಷ ಚೇತನ ಮಕ್ಕಳಾದ (ದಿವ್ಯಾಂಗ) ಚಯನ ತನೀಜಾ,ಇಶಾನ್ ಪ್ರತಾಪಸಿಂಗ, ಕೆವಿನ್ ಮಿಚೆಲ್,ಶ್ರೇಯಂ ಶ್ರೀವರ್ಧನ,ಶ್ರೈಯಂ ಚಕ್ರವರ್ತಿ,ಕೋಚ್ ಸಂದೀಪ ಪಾಲ್,
ತಂಡಕ್ಕೆ ಪ್ರೇರಣಾ ಪುರಸ್ಕಾರ ಪ್ರಶಸ್ತಿಯನ್ನು ಹಾಗೂ ನಗದು ಬಹುಮಾನವನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ, ನಿಪ್ಪಾಣಿ ಶಾಸಕರಾದ ಸೌ.ಶಶಿಕಲಾ ಜೊಲ್ಲೆ ಜಿ, ಜ್ಯೋತಿಪ್ರಸಾದ,ಪ್ರಿಯಾ ಮತ್ತು ಬಸವಪ್ರಸಾದ ಜೊಲ್ಲೆ ಯವರು ನೀಡಿ ಗೌರವಿಸಿದರು.ಇದೇ ವೇಳೆ ಅವರ ಅತ್ಯುತ್ತಮ ಡ್ರಮ್ಮರ ಬ್ರಾಂಡ್ ವೀಕ್ಷಿಸಿ ಅವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ಚಯನಿತ್ ಪೌಂಡೇಶನ್ ಬ್ಯಾಂಡ್ ಭಾರತದಲ್ಲೇ ಮೊದಲನೆಯ (ಮೆದುಳು ವಿಭಿನ್ನವಾಗಿ ಕಾರ್ಯನಿರ್ವಹಿಸುವ ಮಕ್ಕಳು)ನವದೆಹಲಿ ಡ್ರಮ್ಮರ್ ಚಯನ್ ತನೇಜಾ ಅವರಿಂದ ಸ್ಥಾಪಿತವಾಗಿದೆ. ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನಂತಹ ಗೌರವಾನ್ವಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಹೆಸರುಗಳಿಸಿದ್ದು ಅವರನ್ನು ನಮ್ಮ ಜೊಲ್ಲೆ ಗ್ರೂಪ್ ನಲ್ಲಿ ಪ್ರದರ್ಶನ ನೀಡುವ ಮೂಲಕ ಪ್ರೇರಣಾ ಪುರಸ್ಕಾರ ನೀಡಿ,ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಲಾಯಿತು.

ಹುಕ್ಕೇರಿಯ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಕೇಶ್ವರದ ಪ. ಪೂಜ್ಯ ಸಚ್ಚಿದಾನಂದ ಅಭಿನವ ಶ್ರೀ ವಿಧ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು,ಪರಮಾನಂದವಾಡಿಯ ಪ. ಪೂಜ್ಯ ಶ್ರೀ ಸದ್ಗುರು ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ ನಿಪ್ಪಾಣಿಯ ಪ.ಪೂಜ್ಯ ಶ್ರೀ ಪ್ರಾಣಲಿಂಗ ಮಹಾಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page