ರಷ್ಯಾದ ಅಧ್ಯಕ್ಷ ವ್ಹಾಡಿಮಿರ್ ಪುಟಿನ್ ಅವರ ಸರ್ಕಾರಿ ನಿವಾಸದ ಮೇಲೆ ಉಕ್ರೇನ್ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ವಿದೇಶಾಂಗ ಸಚಿವ ಸೆರ್ಗೆಯ್ ಲಾವೊವ್ ಹೇಳಿದ್ದು,
ಆದ್ದರಿಂದ ಮಾಸ್ಕೋದ ಶಾಂತಿ ಒಪ್ಪಂದದ ಮಾತುಕತೆಯ ನಿಲುವು ಬದಲಾಗಲಿದೆ. ೯೧ ದೀರ್ಘ-ಶ್ರೇಣಿಯ ಡೋನ್‌ಗಳೊಂದಿಗೆ ಉಕ್ರೇನ್ ದಾಳಿ ಮಾಡಿದೆ ಎಂದು ಲಾವೊವ್ ಹೇಳಿದರು.
ಇಂತಹ ಅಜಾಗರೂಕ ಕ್ರಮಗಳಿಗೆ ಉತ್ತರಿಸದೆ ಹೋಗುವುದಿಲ್ಲ ಎಂದು ಲಾವೊವ್ ಹೇಳಿದರು. ದಾಳಿಯ ಸಮಯದಲ್ಲಿ ಪುಟಿನ್ ನಿವಾಸದಲ್ಲಿದ್ದರೋ ಎಂಬುದು ಸ್ಪಷ್ಟವಾಗಿಲ್ಲ.





