ಬೆಳಗಾವಿ :–
ನಗರದಲ್ಲಿ ಭಾರತೀಯ ಜನತಾ ಪಕ್ಷ ವತಿಯಿಂದ ಆಯೋಜಿಸಿದ ಕೇಂದ್ರ ಸರ್ಕಾರದ (VB-G RAM G) ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ ಗ್ರಾಮೀಣ) ಯೋಜನೆ ಕುರಿತು ಪತ್ರಿಕಾಗೋಷ್ಠಿಯನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಜನಪ್ರಿಯ ಶಾಸಕರಾದ ಸೌ.ಶಶಿಕಲಾ ಜೊಲ್ಲೆ ನಡೆಸಿ ಮಾತನಾಡಿದರು.

ನಮ್ಮ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ.ಈ ಹಿಂದೆ 100 ದಿನಗಳಿಂದ 125 ದಿನಗಳವರೆಗೆ ಖಾತರಿ ಉದ್ಯೋಗ ಹೆಚ್ಚಳ ಮಾಡಿ,ದಿನಗೂಲಿ ಹೆಚ್ಚಳಗೊಳಿಸಿದೆ. ಈ ಹಿಂದೆ ಮನ್‌ರೇಗಾ ಯೋಜನೆಯಲ್ಲಿ ಅನೇಕ ರೀತಿಯಲ್ಲಿ ದುರ್ಬಳಕೆ,ನಕಲಿ ಜಾಬ್ ಕಾರ್ಡ್,ಭ್ರಷ್ಟಾಚಾರ ತಾಂಡವ ಇತ್ತು.ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿಗೆ ಅದು ಸಹಕಾರಿ ಆಗಿರಲಿಲ್ಲ.ಈ ಯೋಜನೆಯು ಹಿಂದಿನ ನರೆಗಾಕ್ಕಿಂತ ಉತ್ತಮವಾಗಿದೆ.ಬಡ ಜನರ ಅಭಿವೃದ್ಧಿಗಾಗಿರುವ ಯೋಜನೆಯನ್ನು ರಾಜಕೀಯಕ್ಕಾಗಿ ವಿರೋಧಿಸುತ್ತಾ,ಸುಳ್ಳು ಸುದ್ದಿ ಹಬ್ಬಿಸುವವರನ್ನು ನಂಬದಿರೋಣ.ವಾಸ್ತವ ಅಂಶಗಳನ್ನು ತಿಳಿದು,ಎಲ್ಲರಿಗೂ ಸತ್ಯವನ್ನು ತಿಳಿಸೋಣ.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ, ಶ್ರೀ ಅರವಿಂದ ಪಾಟೀಲ,ಗ್ರಾಮೀಣ ಅಧ್ಯಕ್ಷರಾದ ಶ್ರೀ ಸುಭಾಷ ಪಾಟೀಲ,ನಗರ ಅಧ್ಯಕ್ಷರಾದ ಸೌ.ಗೀತಾ ಸುತಾರ,ಶ್ರೀ ಎಂ. ಬಿ.ಜಿರಳೆ ವಕೀಲರು,ಪಕ್ಷದ ಮುಖಂಡರು ಉಪಸ್ಥಿತರಿದ್ದರು.





