“ಶ್ರೀ ಎಂ.ಕೆ.ಕವಟಗಿಮಠ ಫೌಂಡೇಶನ್,ಸಿ.ಎಲ್.ಇ ಸಂಸ್ಥೆಯ ಸಹಯೋಗದಲ್ಲಿ ಕೌಶಲ್ಯ ವಂಚಿತ ವಿದ್ಯಾವಂತರಿಗೆ ಹೊಸ ತರಬೇತಿಗಳನ್ನು ಪ್ರಾರಂಭ ಮಾಡಲಾಗುತ್ತಿದೆ”


ಚಿಕ್ಕೋಡಿ :–

ಶ್ರೀ ಎಂ.ಕೆ.ಕವಟಗಿಮಠ ಫೌಂಡೇಶನ್, ಚಿಕ್ಕೋಡಿ. ಹಾಗೂ ಸಿ.ಎಲ್.ಇ ಸಂಸ್ಥೆಯ ಸಹಯೋಗದಲ್ಲಿ ಚಿಕ್ಕೋಡಿ ಹಾಗೂ ಚಿಕ್ಕೋಡಿ ಸುತ್ತಮುತ್ತಲಿನ ಕೌಶಲ್ಯ ವಂಚಿತ ವಿದ್ಯಾವಂತರಿಗೆ ಹೊಸ ತರಬೇತಿಗಳನ್ನು ಪ್ರಾರಂಭ ಮಾಡಲಾಗುತ್ತಿದೆ.

ಅವುಗಳೆಂದರೆ ಸಿ.ಎನ್.ಸಿ. ಅಪರೇಟರ್ ಕೋರ್ಸ , ವಾಹನ ಚಾಲನೆಗಾಗಿ ಮೋಟಾರ್ ಡ್ರೈವಿಂಗ್ ತರಬೇತಿ, ಸ್ವಂತ ಉದ್ಯೋಗ ಸೃಷ್ಠಿಗಾಗಿ ಮೋಟರ ವೈಂಡಿಂಗ್ ಕೋರ್ಸಗಳನ್ನು ಶುಕ್ರವಾರ ದಿನಾಂಕ ೧೬-೦೧-೨೦೨೬ ರಂದು ಉದ್ಘಾಟಿಸಲಾಗುತ್ತಿದೆ.

ಇದರ ಜೊತೆಗೆ ವಿವಿಧ ಆಟಗಳನ್ನು ಅಭ್ಯಾಸಿಸಲು ಅನುಕೂಲವಾಗುವಂತೆ ಸುಸಜ್ಜಿತ ಆಟದ ಮಳಿಗೆ ( Shri Mahantesh Kavatagimath Turf Sports Arena Complex) ಉದ್ಘಾಟನೆಯನ್ನು ಶ್ರೀ. ಮಹಾಂತೇಶಣ್ಣಾ ಕವಟಗಿಮಠ ಅವರ ಜನ್ಮದಿನದ ನಿಮಿತ್ಯ , ಶ್ರೀ.ಮ.ನಿ.ಜ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧಸಂಸ್ಥಾನ ಮಠ, ನಿಡಸೋಸಿ. ಶ್ರೀ. ಮ.ನಿ.ಪ್ರ ಸಂಪಾದನ ಮಹಾಸ್ವಾಮಿಗಳು, ಸಂಪಾದನ ಚರಮೂರ್ತಿ ಮಠ, ಚಿಕ್ಕೋಡಿ. ಹಾಗೂ ಶ್ರೀ ಶಿವಪ್ರಸಾದ ದೇವರು, ಸಿದ್ಧಸಂಸ್ಥಾನ ಮಠ, ಚಿಂಚಣಿ. ಇವರುಗಳ ಅಮೃತ ಹಸ್ತದಿಂದ ಉದ್ಘಾಟಿಸಲು ನಿಶ್ಚಯಿಸಿದ್ದಾರೆ. ಎಂದು ಸಿ.ಎಲ್.ಇ. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಗದೀಶಣ್ಣಾ ಕವಟಗಿಮಠ ತಿಳಿಸಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ. ಎನ್.ಎಸ್.ವಂಟಮುತ್ತೆ, ನಿರ್ದೆಶಕರಾದ ಶ್ರೀ ಮಲ್ಲಿಕಾರ್ಜುನ ಕವಟಗಿಮಠ, ಆಡಳಿತಾಧಿಕಾರಿಗಳಾದ ಶ್ರೀ. ಎಸ.ಐ.ಬಿಸ್ಕೋಪ ಹಾಗೂ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page