ನಿಪ್ಪಾಣಿ :–
“ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಶ್ರಮಿಸಿದ ಮಹಾನ್ ಚೇತನರನ್ನು ಸ್ಮರಿಸೋಣ.”🇮🇳
ಇಂದು ನಿಪ್ಪಾಣಿ ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಜನಪ್ರಿಯ ಶಾಸಕರಾದ ಸೌ.ಶಶಿಕಲಾ ಜೊಲ್ಲೆ ಯವರು ನೆರವೇರಿಸಿ,ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿ,ಆಕರ್ಷಕ ಪಥಸಂಚಲನವನ್ನು ವೀಕ್ಷಿಸಿ,ಗೌರವ ವಂದನೆ ಸ್ವೀಕರಿಸಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

26ನೇ ಜನವರಿ 1950ರಂದು ಭಾರತವು ಸಂವಿಧಾನವನ್ನು ಅಂಗೀಕರಿಸಿ ಗಣರಾಜ್ಯವಾದ ಮಹಾನ್ ದಿನವೇ ಇಂದು. ವಿಶ್ವಕ್ಕೆ ಮಾದರಿಯಾದ ನಮ್ಮ ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಅದರ ರಕ್ಷಣೆಗೂ ನಾವು ಸದಾ ಬದ್ಧರಾಗಿರೋಣ.ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.ಒಟ್ಟಾಗಿ ದೇಶದ ಏಕತೆ,ಸಮೃದ್ಧಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸೋಣ.ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸೋಣ.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು,ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು,ಶಿಕ್ಷಕರು,ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.





