“ಚಿಕ್ಕೋಡಿಯ ಇಂದಿರಾ ಕ್ಯಾಂಟಿನ ೭೭ ನೇ ಗಣರಾಜ್ಯೋತ್ಸವದ ನಿಮಿತ್ತವಾಗಿ ಇವತ್ತಿನ ದಿನ ಎರಡು ಇಂದಿರಾ ಕ್ಯಾಂಟೀನಗಳು ಪ್ರಾರಂಭ”

ಚಿಕ್ಕೋಡಿ :–

ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ
೭೭ ನೇ ಗಣರಾಜ್ಯೋತ್ಸವದ ನಿಮಿತ್ತವಾಗಿ ಇವತ್ತಿನ ದಿನ ಚಿಕ್ಕೋಡಿಯಲ್ಲಿ ಮಾನ್ಯ ಶಾಸಕಾರಾದಂತಹ
ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಹಾಗೂ ಮಾಜಿ ಲೋಕಸಭಾ ಸದಸ್ಯರಾದಂತ ಶ್ರೀ ಪ್ರಕಾಶಅಣ್ಣಾ ಹುಕ್ಕೇರಿ ಅವರ
ಪ್ರಯತ್ನದಿಂದ ಎರಡು ಇಂದಿರಾ ಕ್ಯಾಂಟೀನ ಚಿಕ್ಕೋಡಿಯಲ್ಲಿ ಪ್ರಾರಂಭವಾಗಿರುವುದು ಹೆಮ್ಮೆಯ ವಿಷಯ.
ಈ ಎರಡೂ ಇಂದಿರಾ ಕ್ಯಾಂಟಿನ ಸುಮಾರು ೬ ತಿಂಗಳು ಹಾಗೂ ೧ ವರ್ಷದಿಂದ ಕಟ್ಟಡ ನಿರ್ಮಿಸಿದ್ದು
ಇಂದಿರಾ ಕ್ಯಾಂಟಿನ ಪ್ರಾರಂಭ ಮಾಡದೇ ಇರುವುದರಿಂದ ಧೂಳು ತಿನ್ನುತ್ತಿದ್ದವು. ಈ ಬಗ್ಗೆ ಸುದ್ಧಿ ವಾಹಿನಿಯಲ್ಲಿ
ಇಂದಿರಾ ಕ್ಯಾಂಟಿನ ಪ್ರಾರಂಭ ಮಾಡದೇ ಇರುವುದು ಸುದ್ದಿಯಾಗಿತ್ತು. ಬಹುಶಹ ಇಂದಿರಾ ಕ್ಯಾಂಟಿನ ಬಗ್ಗೆ
ಸುದ್ದಿ ವಾಹಿನಿಗಳಲ್ಲಿ ಪ್ರಾಸಾರವಾಗಿದ್ದರಿಂದ ಸರಕಾರ ಎಚ್ಚೆತ್ತುಕೊಂಡು ಇವತ್ತಿನ ದಿನ ಎರಡೂ ಇಂದಿರಾ
ಕ್ಯಾಂಟಿನಗಳನ್ನು ಪ್ರಾರಂಭಿಸಿರುವುದು ಒಳ್ಳೆಯ ಸಂಗತಿಯಾಗಿದೆ. ಇಂದಿರಾ ಕ್ಯಾಂಟಿನ ಪ್ರಾರಂಭವಾಗಲು ಸುದ್ದಿ
ವಾಹನಿಗಳು, ಟಿ.ವಿ. ಮಾಧ್ಯಮಗಳು ಕಾರಣಿಭುತರಾಗಿದ್ದಾರೆ. ಅದಕ್ಕಾಗಿ ಇವರೆಲ್ಲರಿಗೂ ಧನ್ಯವಾದಗಳು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾಗಿರುವುದರಿಂದ ಬೇರೆ ತಾಲೂಕಿನಿಂದ ಅನೇಕ ಜನರು ಬೇರೆ ಬೇರೆ ಕೆಲಸಗಳಿಂದ
ಚಿಕ್ಕೋಡಿಗೆ ಬರುತ್ತಿದ್ದು ಸದರಿ ಇಂದಿರಾ ಕ್ಯಾಂಟೀನ ಹೆಸ್ಕಾಂ ಕಂಪೌಂಡನಲ್ಲಿ ತೆರೆದಿದ್ದು ಈ ಭಾಗದಲ್ಲಿ ಸಾರ್ವಜನಿಕ
ಆಸ್ಪತ್ರೆ ಇದ್ದು ಇಲ್ಲಿಗೆ ಬರುವ ಹೊರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ, ಬಡ ಜನರಿಗೆ, ಆರ್ಥಿಕವಾಗಿ
ಹಿಂದುಳಿದವರಿಗೆ, ಪೀಡಿತ ಬಲಿಪಶುಗಳಿಗೆ, ಅನಾಥರಿಗೆ, ನಿರ್ಗತಿಕರಿಗೆ, ಮಾನಸಿಕವಾಗಿ ನೊಂದದಥವರಿಗೆ,
ದಿಕ್ಕಿಲ್ಲದವರಿಗೆ ತೊಂದರೆಯಲ್ಲಿರುವಂತಹ ಜನರ ಹಸು ನೀಗಸಲು ಈ ಇಂದಿರಾ ಕ್ಯಾಂಟೀನ ಆಧಾರ ಕೇಂದ್ರವಾಗಿದೆ.
ಅದೇ ರೀತಿ ಬಿಇಓ ಆಫೀಸ ಕಂಪೌಂಡದಲ್ಲಿಯೂ ಕೂಡ ಇನ್ನೊಂದು ಕ್ಯಾಂಟಿನ ಈ ದಿನ ಪ್ರಾರಂಭವಾಗಿರುತ್ತದೆ.
ಚಿಕ್ಕೋಡಿ ಜನತೆಗೆ ಉಪಹಾರ, ಊಟದ ವ್ಯವಸ್ಥೆ ಕಡಿಮೆ ದರದಲ್ಲಿ ಲಭ್ಯವಿದ್ದು ಈ ಎರಡು ಇಂದಿರಾ ಕ್ಯಾಂಟಿನನಿಂದ
ಅನೇಕರಿಗೆ ಸಹಾಯವಾಗಿದೆ.
ಮಾನ್ಯ ಶಾಸಕರಾದ ಶ್ರೀ ಗಣೇಶ ಅಣ್ಣಾ ಹಾಗೂ ಮಾನ್ಯ ಮಾಜಿ ಲೋಕಸಭಾ ಸದಸ್ಯರು ಇಂದಿರಾ
ಕ್ಯಾಂಟಿನದಲ್ಲಿ ಪೌಷ್ಠಿಕ ಉತ್ತಮ ಗುಣಮಟ್ಟದ ಉಪಹಾರ ವ್ಯವಸ್ಥೆ ಕಾಯ್ದುಕೊಂಡು ಹೋಗಲು ಗಮನ ಕೊಡಲಿ ಅಂತ ಅವರಲ್ಲಿ ವಿನಂತಿಸಿದ
ಶಶಿದರ ಕೋಪರ್ಡೆ
ಪುರುಷರ ಹಕ್ಕುಗಳ ಹೋರಾಟಗಾರ ಚಿಕ್ಕೋಡಿ ಇವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page