“ಕಬ್ಬೂರ ಪಟ್ಟಣದಲ್ಲಿ ವಿರಾಟ ಹಿಂದೂ ಸಮ್ಮೇಳನ ಭವ್ಯ ಶೋಭಾಯಾತ್ರೆ ಹಾಗೂ ಸಮ್ಮೇಳನ ಕಾರ್ಯಕ್ರಮ ಜರುಗಿತು”

ಚಿಕ್ಕೋಡಿ :–

ತಾಲೂಕಿನ ಕಬ್ಬೂರ ಪಟ್ಟಣದಲ್ಲಿ ಚಿಕ್ಕೋಡಿ ಗ್ರಾಮಾಂತರ ಕಬ್ಬೂರ ಹೋಬಳಿಯ ವಿರಾಟ ಹಿಂದೂ ಸಮ್ಮೇಳನ ಭವ್ಯ ಶೋಭಾಯಾತ್ರೆ ಹಾಗೂ ಸಮ್ಮೇಳನ ಕಾರ್ಯಕ್ರಮದಲ್ಲಿ ಕಬ್ಬೂರ ಶಂಕರ ಮಠದ ಪ.ಪೂ.ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಶ್ರೀ ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿ,ಚಾಲನೆ ನೀಡಿದರು.

“ಭಾರತೀಯರೆಲ್ಲರೂ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮಾತಾಗಬೇಕು ಆಗ ಮಾತ್ರ ಸುಭದ್ರ, ಸಂಘಟಿತ ದೇಶ ನಿರ್ಮಿಸಲು ಸಾಧ್ಯ.”ಹಿಂದೂ ಪರಂಪರೆ, ಆಚರಣೆ, ಚಿಂತನೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ, ಸಮಸ್ತ ಹಿಂದೂ ಸಮಾಜ ಜಾಗೃತಿಗಾಗಿ ವಿರಾಟ್ ಹಿಂದೂ ಸಮಾವೇಶ ಸಮ್ಮೇಳನ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಆರ್.ಎಸ್.ಎಸ್.ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ಶ್ರೀ ಅರವಿಂದ ದೇಶಪಾಂಡೆ ಜಿ,ರಾಜ್ಯ ಪ್ರಕಲ್ಪ ಪ್ರಮುಖರಾದ ಶ್ರೀ ಕಿರಣ ರಾಮ,ಶ್ರೀ ಸುರೇಶ ಬೆಲ್ಲದ,ಶ್ರೀ ಮಹೇಶ ಭಾತೆ,ಶ್ರೀ ದುಂಡಪ್ಪ ಬೆಂಡವಾಡೆ,ಶ್ರೀ ಮಹೇಶ ಬಾಕಳೆ,ಶ್ರೀ ಆರ್.ಕೆ. ಬಾಗಿ,ನೂರಾರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page