“ಶ್ರೀ ಬೀರೇಶ್ವರ ಕೊ ಆಪ್ ಸೊಸೈಟಿಯು 100 ಕೋಟಿ ರೂ ಠೇವಣಿ ಗುರಿ ಸಾಧನೆಯ ಹಿನ್ನೆಲೆಯಲ್ಲಿ ಠೇವು ಸಂಕಲ್ಪ ಪೂರ್ತಿ ಠೇವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು”

ಚಿಕ್ಕೋಡಿ :–
ತಾಲುಕಿನ ಯಕ್ಸಂಬಾ ಗ್ರಾಮದಲ್ಲಿ ಶ್ರೀ ಬೀರೇಶ್ವರ ದೇವರ ಹೆಸರಿನಲ್ಲಿ 1991ರಲ್ಲಿ ಸ್ಥಾಪನೆಯಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಸೊಸೈಟಿಯು ಇಂದು ಸಹಕಾರ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ.

ಚಿಕ್ಕೋಡಿ ಮತಕ್ಷೇತ್ರದ ಮಾಜಿ ಸಂಸದರು ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಅಣ್ಣಾಸಾಹೇಬ ಶಂಕರ ಜೊಲ್ಲೆ ಹಾಗೂ ಸಹ ಸಂಸ್ಥಾಪಕರಾದ ಮಾಜಿ ಸಚಿವರು ಮತ್ತು ನಿಪ್ಪಾಣಿ ಮತಕ್ಷೇತ್ರದ ಹಾಲಿ ಶಾಸಕರಾದ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರ ಮುಂದಾಳತ್ವ ಹಾಗೂ ಸೂಕ್ತ ಮಾರ್ಗದರ್ಶನದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ್ಯಂತ ಜನ ಮನ್ನಣೆ ಗಳಿಸಿದ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಆಧುನಿಕತೆಗೆ ಅನುಗುಣವಾಗಿ ಸಾಧನೆಗೂ ಮೀರಿ ಮುನ್ನಡೆದಿದೆ.

ಸಂಸ್ಥೆಯ ಬೆಳಗಾವಿ ಒಂದನೇ ಶಾಖೆಯು 100 ಕೋಟಿ ರೂ
ಠೇವಣಿ ಗುರಿ ಸಾಧನೆಯ ಹಿನ್ನೆಲೆಯಲ್ಲಿ ‘ ಠೇವು ಸಂಕಲ್ಪ ಪೂರ್ತಿ ಠೇವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಖಾ ಚೇರಮನರಾದ ಶ್ರೀ ಅಶೋಕ ದಾನವಾಡೆ, ಶಾಖಾ ನಿರ್ದೇಶಕರಾದ ಶ್ರೀ ಶಶಿಧರ ನಾಡಗೌಡ , ಶ್ರೀ ನಾಗಪ್ಪ ಪಾಟೀಲ, ಉಪ ಪ್ರಧಾನ ವ್ಯವಸ್ಥಾಪಕರಾದ ಸುರೇಶ ಮಾನೆ, ಫ ವಂದನಾರ್ಪಣೆಯೊಂದಿಗೆ ಸಮಾಪ್ತಿಯಾಯಿತು..

Share this post:

Leave a Reply

Your email address will not be published. Required fields are marked *

You cannot copy content of this page