ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಅಂಶಗಳಿದ್ದರೆ ಅದನ್ನು ಓದಲು ಸಾಧ್ಯವಿಲ್ಲ : ರಾಜ್ಯಪಾಲ ಥಾವರ್ ಚಂದ್ ಗೆಹೋಟ್

ಬೆಂಗಳೂರು :–

ಕೇಂದ್ರ ಸರ್ಕಾರದ ನೀತಿಗಳು, ತೆರಿಗೆ ಅನ್ಯಾಯ ಮತ್ತು ಅನುದಾನ ಹಂಚಿಕೆಯ ತಾರತಮ್ಯ ಕುರಿತ ಟೀಕೆಗಳನ್ನು ಒಳಗೊಂಡಿರುವ ಗಣರಾಜ್ಯೋತ್ಸವ ಭಾಷಣವನ್ನು ಓದಲು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಅಂಶಗಳಿದ್ದರೆ ಅದನ್ನು ಓದಲು ಸಾಧ್ಯವಿಲ್ಲ. ಸರ್ಕಾರ ತಿದ್ದುಪಡಿ ಮಾಡದಿದ್ದರೆ, ನಾನೇ ಸಿದ್ಧಪಡಿಸಿದ ಭಾಷಣವನ್ನು ಓದುತ್ತೇನೆ ಎಂದು ರಾಜ್ಯಪಾಲರು ಪಟ್ಟುಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.

Share this post:

Leave a Reply

Your email address will not be published. Required fields are marked *

You cannot copy content of this page