ಚಿಕ್ಕೋಡಿ :–
ಶಾಂತಪ್ಪಣ್ಣಾ ಮಿರಜಿ ಪಟ್ಟಣ ಸಹಕಾರಿ ಬ್ಯಾಂಕಿನ ಡಾ.ಆರ್.ಕೆ.ಕಾಲನಿ ಶಾಖೆಯಲ್ಲಿ, 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
77 ನೇ ಗಣರಾಜ್ಯೋತ್ಸವದ ನಿಮಿತ್ಯ ಮಹಾತ್ಮಾ ಗಾಂಧಿಜೀ ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರಗಳಿಗೆ, ಬ್ಯಾಂಕಿನ ನಿರ್ದೇಶಕರಾದ ಈರಣ್ಣಾ ಹಂಪಣ್ಣವರ ಪೂಜೆ ಸಲ್ಲಿಸಿದರು.

ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಉದಯ ಭಾತೆ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಣರಾಜ್ಯೋತ್ಸವ ಎಂದರೆ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಗುರುತಿಸಲು ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುವ ರಾಷ್ಟ್ರೀಯ ಹಬ್ಬ. 1950ರ ಜನವರಿ 26 ರಂದು ಸಂವಿಧಾನ ಜಾರಿಗೆ ಬಂದು, ಈ ದಿನದಿಂದ ಭಾರತವು ಅಧಿಕೃತವಾಗಿ ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವಾಯಿತು. ಬ್ರಿಟಿಷ್ ಕಾನೂನುಗಳನ್ನು ಬದಲಾಯಿಸಿ ಭಾರತೀಯರಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅಧಿಕಾರ ನೀಡಲಾಯಿತು.
ಗಣರಾಜ್ಯೋತ್ಸವವು ಭಾರತದ ಸಂವಿಧಾನಿಕ ಅಡಿಪಾಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಚರಿಸುತ್ತದೆ. ಇದು ಭಾರತದ ಆಡಳಿತದಲ್ಲಿ ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಾವಸಾಹೇಬ ಗೌರಾಜ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ರಾವಸಾಹೇಬ ಕೇಸ್ತಿ, ಶಂಕರ ಬಿಷ್ಟೆ, ಪ್ರೀತಿ ಕೆಂಬಳೆ, ಕೋಮಲ ಭೋಸಗೆ, ಪೂರ್ಣಿಮಾ ಸೊಲ್ಲಾಪೂರೆ, ಬಾಹುಬಲಿ ಕಾಮಗೌಡ, ಅಶೋಕ ಶೇಡಬಾಳೆ, ನಾಗೇಶ ಹುಜುರೆ ಉಪಸ್ಥಿತರಿದ್ದರು.





