ನಿಪ್ಪಾಣಿ :–
ನಿಪ್ಪಾಣಿ ನಗರದ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅವರಣರದಲ್ಲಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ – ಸ್ಟೇಟ್) ಹಾಗೂ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಯಮಿತ.,(ಬಹು -ರಾಜ್ಯ) ಸಂಯುಕ್ತಾಶ್ರಯದಲ್ಲಿ “ಮಾರ್ಚ 11 ರಿಂದ 15” ವರೆಗೆ 5 ದಿನಗಳ ಕಾಲ ನಡೆಯಲಿರುವ ಬೃಹತ್ “ಕೃಷಿ ಉತ್ಸವ” ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯನ್ನು ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಶ್ರೀ ಬಸವಪ್ರಸಾದ ಜೊಲ್ಲೆ ಯವರು ನಡೆಸಿ ಮಾಹಿತಿ ನೀಡಿದರು.ಇದೇ ವೇಳೆ ಕೃಷಿ ಉತ್ಸವದ ಕರ ಪತ್ರಗಳನ್ನು ಬಿಡುಗಡೆಗೊಳಿಸಿದರು.

ಈ ಕೃಷಿ ಉತ್ಸವ 12 ಎಕರೆ ಜಾಗದಲ್ಲಿ 300 ಸ್ಟಾಲ್ ಗಳನ್ನೂ ಒಳಗೊಂಡು ಕೃಷಿ,ಆಹಾರ,ಗೃಹೋಪಯೋಗಿ ವಸ್ತುಗಳು,ಗ್ರಾಹಕರ,ಅಟೋಮೊಬೈಲ್ ವಿವಿಧ ಬಗೆಯ ರೈತರಿಗೆ ಉಪಯೋಗವಾಗುವ ಮಳಿಗೆಗಳು ಇರಲಿವೆ.ಚಿಕ್ಕ ಮಕ್ಕಳಿಗೆ ಅಮ್ಯೂಸ್ಮೆಂಟ್ ಪಾರ್ಕ್(ಮನೋರಂಜನಾ ಉದ್ಯಾನ) ಇರಲಿದೆ.ಕೃಷಿ,ಪಶುಸಂಗೋಪನೆ, ಹೈನುಗಾರಿಕೆ,ಸಾವಯವ ಕೃಷಿ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.ಪ್ರತಿದಿನ ಸಾಯಂಕಾಲ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರವೇರಲಿವೆ.
ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಪ್ಪಾಸಾಹೇಬ ಜೊಲ್ಲೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಎಂ.ಪಿ.ಪಾಟೀಲ, ಉಪಾಧ್ಯಕ್ಷರಾದ ಶ್ರೀ ಪವನ ಪಾಟೀಲ, ನಿರ್ದೇಶಕ ಮಂಡಳಿ ಸದಸ್ಯರು,ಪತ್ರಿಕಾ ಮಾಧ್ಯಮದವರು,ಸಿಬ್ಬಂದಿಗಳು ಉಪಸ್ಥಿತರಿದ್ದರು.





