“ಕೇಂದ್ರ ಬಜೆಟ್ ದಲ್ಲಿ, ರೈತರ ಸಾಲ ಮಣ್ಣಾ ಮಾಡಿಲ್ಲ,ಯುವಕರಿಗೆ ಉದ್ಯೋಗಗಳನ್ನು ಕೊಡುವ ವಿಚಾರವಿಲ್ಲ, ಕರ್ನಾಟಕಕ್ಕೆ ಮಲತಾಯಿ ಧೋರಣೆ” : ಚಂದ್ರಕಾಂತ ಹುಕ್ಕೇರಿ

ಚಿಕ್ಕೋಡಿ :–

2026-27ನೇ ಸಾಲಿನ ಕೇಂದ್ರ ಬಜೆಟ್ ದಲ್ಲಿ, ರೈತರ ಸಾಲ ಮಣ್ಣಾ ಮಾಡಿಲ್ಲ, ಯುವಕರಿಗೆ ಉದ್ಯೋಗಗಳನ್ನು ಕೊಡುವ ವಿಚಾರವಿಲ್ಲ, ಕರ್ನಾಟಕಕ್ಕೆ ಮಲತಾಯಿ ಧೋರಣೆ ಕಂಡು ಬರುತ್ತಲಿದೆ ಎಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಅವರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಹೈರಾಣಾಗಿದ್ದಾರೆ ಅವರ ಸಾಲ ಮಣ್ಣಾ ಮಾಡಬೇಕಿತ್ತು, ರಸಗೊಬ್ಬರಗಳ ದರ ಗಗನಕ್ಕೇರಿದೆ ಹೊಲಗಳಲ್ಲಿ ವರ್ಷವಿಡೀ ದುಡಿದರೂ ಹಾಕಿದ ಬಂಡವಾಳ ಮರಳಿ ಬರುವ ವಿಶ್ವಾಸ ರೈತರಲ್ಲಿಲ್ಲ, ಅವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿದ್ದರೆ ರೈತರು ಅಲ್ಪ- ಸ್ವಲ್ಪ ನೆಮ್ಮದಿ ಕಾಣಬಹುದಿತ್ತು, ಕರ್ನಾಟಕದಲ್ಲಿ ಬೇರೆ ಸರಕಾರ ಇದ್ದ ಕಾರಣ ಮಲತಾಯಿ ಧೋರಣೆ ಎದ್ದು ಕಾಣುತ್ತಲಿದೆ, ಕೋಟ್ಯಂತರ ವಿದ್ಯಾವಂತ ಯುವಕರು ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ, ಸರಕಾರದಲ್ಲಿ ಸಾಕಷ್ಟು ಖಾಲಿ ಹುದ್ದೆಗಳು ಇದ್ದರೂ ಕೂಡ ಅವುಗಳ ಭರ್ತಿಗಾಗಿ ಬಜೆಟ್ ದಲ್ಲಿ ಪ್ರಸ್ತಾಪಿಸಿಲ್ಲ, ತೆರಿಗೆಗಳನ್ನು ಹೆಚ್ಚಿಸಿವ ಮೂಲಕ ಜನರ ಬದುಕಿನ ಮೇಲೆ ಬರೆ ಎಳೆದಿದ್ದಾರೆ. ಒಟ್ಟಿಗೆ ಈ ಕೇಂದ್ರ ಬಜೆಟ್ ಅಸಮಾಧಾನಕಾರಕವಾಗಿದೆ.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page