“ವಿದ್ಯಾರ್ಥಿ ಸಾಧನೆಗೆ ಚೌಸನ್ ಫೌಂಡೇಶನ್ ಮಹತ್ವದ ಕೊಡುಗೆ”


ಚಿಕ್ಕೋಡಿ :–

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಸಾಧನೆ ಜೊತೆಗೆ ಸವಾಲುಗಳನ್ನು ಎದುರಿಸಲು ಧನಾತ್ಮಕ ಚಿಂತನೆಯೊಂದಿಗೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಚೌಸನ್ ಫೌಂಡೇಶನ್ ವ್ಯವಸ್ಥಾಪಕರಾದ ಶ್ರೀ ಸುರೇಂದ್ರನಾಥ ಟಿ. ಚೌಗುಲೆ ಹಾಗೂ ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಟಿ. ಚೌಗುಲೆ ಅವರ ಕಾರ್ಯ ಇತರರಿಗೆ ಪ್ರೇರಣದಾಯಕವಾಗಿದೆ ಎಂದು ಹೇಳಿ ಅವರ ಶೈಕ್ಷಣಿಕ ಕಾರ್ಯವನ್ನು ಶ್ಲಾಘಿಸಿ

ಈ ದಿಶೆಯಲ್ಲಿ ಚೌಸನ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದು ಎಸ್ ಎಸ್ ಝಳಕೆ ಸರ್ಕಾರಿ ಪ್ರೌಢಶಾಲೆ ಬಸವನಾಳಗಡ್ಡಿಯ ಮುಖ್ಯೋಪಾಧ್ಯಾಯರಾದ ಎಸ್ ಎಸ್ ಹಚ್ಚಡದ ಹೇಳಿದರು. ಇತ್ತೀಚಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಚೌಸನ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಸ್ ಎಸ್ ಝಳಕೆ ಸರ್ಕಾರಿ ಪ್ರೌಢಶಾಲೆ, ಬಸವನಾಳಗಡ್ಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮೂಹ ಪಾಠ ಬೋಧನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಧ್ಯಾಪಕರಾದ ಡಾಕ್ಟರ್ ಎನ್ ಎಸ್ ಸಿಂದೆ ಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿ ಪರಿವರ್ತಿಸಲು ಸದಾ ಕ್ರಿಯಾಶೀಲರಾಗಿರಬೇಕು ಪ್ರಜಾಪ್ರಭುತ್ವ ಯಶಸ್ವಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ ಅದಕ್ಕಾಗಿ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡಿಯಬೇಕೆಂದು ಹೇಳಿದರು. ಶಿಕ್ಷಕರಾದ ಎ ಬಿ ಸೊಲ್ಲಾಪುರ ಅವರು ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಂತ ಮೌಲ್ಯಯುತವಾದದ್ದು ಶಿಕ್ಷಣದ ಜೊತೆ ತಾಳ್ಮೆ ಶಿಸ್ತು ಮತ್ತು ವಿನಯತೆ, ಸಮಯಪ್ರಜ್ಞೆ ಕೂಡ ಕಲಿತು ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಲು ಕರೆ ನೀಡಿ ಪ್ರತಿಯೊಬ್ಬರು ಪುಸ್ತಕ ಓದುವ ಪ್ರವೃತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು
ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾಕ್ಟರ್ ಕೆ ಡಿ ಕನಕಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ತರುವ ಸಲುವಾಗಿ ವಿದ್ಯಾರ್ಥಿಗಳಿಗೆ ವಿಷಯವಾರು ಪರೀಕ್ಷೆಯನ್ನು ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು . ವಿಷಯವಾರು ಪರೀಕ್ಷೆಯಲ್ಲಿ ಅಗ್ರ 3 ಸ್ಥಾನ ಪಡೆದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಚೌಸನ್ ಫೌಂಡೇಶನ್ ವತಿಯಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಎಂ ಕೋಟೆಗೆ, ಎಂ ಎಚ್ .ರಾವುತಪ್ಪ ಎಂ ಎಂ ಬೋಸ್ಲೆ ಸಪ್ನಾ ಕೆ , ಮಹೇಶ್ ಬರಗಾಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರವೀಣ್ ಕಾಂಬಳೆ ನಿರ್ವಹಿಸಿದರು ಜಯಸಿಂಹ ನಾವಿ ಸ್ವಾಗತಿಸಿದರು ಪ್ರೀತಿ ಗೊದ್ದಾಳೆ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು ಸುಕನ್ಯಾ ಸಂಗಡಿಗರು ಸ್ವಾಗತಿ ಗೀತೆ ಹಾಡಿದರು. ಅನಿಲ್ ಧನವಾಡಿ ವಂದಿಸಿದರು

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page