“ಚೌಸನ್ ಶಿಕ್ಷಣ ಮಹಾವಿದ್ಯಾಲಯ : ಸಮೂಹ ಪಾಠ ಬೋಧನೆ ಸಮಾರೋಪ ಸಮಾರಂಭ”


ಚಿಕ್ಕೋಡಿ :–

ಒಂದು ಉತ್ತಮ ವಿವೇಚನೆಗೆ ಇತಿಹಾಸವನ್ನು ಸೃಷ್ಟಿ ಮಾಡುವ ಶಕ್ತಿ ಇದೆ ಬೆಳೆಯುವ ಮಕ್ಕಳಲ್ಲಿ ಸ್ವಾಭಿಮಾನದ ಪಾಠದೊಂದಿಗೆ ಧನಾತ್ಮಕ ಅಂಶಗಳನ್ನು ಬೆಳೆಸಬೇಕೆಂದು ಹಿರಿಯ ಶಿಕ್ಷಕರಾದ ಎಂಕೆ ಪತ್ತಾರ್ ಹೇಳಿದರು. ಇತ್ತೀಚಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಚೌಸನ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆ ಕೇರೂರ್ ಇವರ ಸಂಯುಕ್ತ ಆಶ್ರಯ ಕೇರೂರ್ ಸರ್ಕಾರಿ ಪ್ರೌಢಶಾಲೆ ದಲ್ಲಿ ನಡೆದ ಸಮೂಹ ಪಾಠ ಬೋಧನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಚೌಸನ್ ಫೌಂಡೇಶನ್ ನಡೆಸುತ್ತಿರುವ ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತಿವೆ ಎಂದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಚೌಸನ್ ಫೌಂಡೇಶನ್ ವತಿಯಿಂದ ನೀಡಲಾಗುತ್ತಿರುವ ಪ್ರಮಾಣಪತ್ರಗಳು ಹಾಗೂ ಸ್ಮರಣಿಕೆಗಳು ಅತ್ಯಂತ ಪ್ರೇರಣಾದಾಯಕವಾಗಿವೆ ಎಂದು ಹೇಳಿದರು. ಶಿಕ್ಷಣದ ಪ್ರಗತಿಗಾಗಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಚೌಸನ್ ಫೌಂಡೇಶನ್ ವ್ಯವಸ್ಥಾಪಕರಾದ ಶ್ರೀ ಸುರೇಂದ್ರನಾಥ ಟಿ. ಚೌಗುಲೆ ಹಾಗೂ ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಟಿ. ಚೌಗುಲೆ ಅವರ ಕಾರ್ಯ ನಿಜಕ್ಕೂ ಪ್ರಶಂಷನೀಯವಾದದ್ದು ಎಂದು ಹೇಳಿದರು.
. ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಧ್ಯಾಪಕರಾದ ಡಾಕ್ಟರ್ ಎನ್ ಎಸ್ ಸಿಂದೆ ಯವರು ಬದುಕಿನ ಯಶಸ್ವಿಗೆ ಅಂಕಗಳೇ ಆಧಾರವಲ್ಲ ಬದಲಾಗಿ ಸಾಮಾನ್ಯ ಜ್ಞಾನದೊಂದಿಗೆ ಅವರ ಬೌದ್ಧಿಕ ವಿಕಸನದತ್ತ ಶಿಕ್ಷಕರು ಪಾಲಕರು ಶ್ರಮಿಸಬೇಕು ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಯನ್ನು ಬೆಳೆಸುವುದು ಅವಶ್ಯವಾಗಿದೆ ಎಂದರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಧ್ಯಾಪಕರಾದ ಡಾಕ್ಟರ್ ಕೆ ಡಿ ಕನಕಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ತರುವ ಸಲುವಾಗಿ ವಿದ್ಯಾರ್ಥಿಗಳಿಗೆ ವಿಷಯವಾರು ಪರೀಕ್ಷೆಯನ್ನು ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು . ವಿಷಯವಾರು ಪರೀಕ್ಷೆಯಲ್ಲಿ ಅಗ್ರ 3 ಸ್ಥಾನ ಪಡೆದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಟಿ ಕಾಂಬ್ಳೆ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆರ್ ಏ ದೇವ ಋಷಿ ಎನ್ ಜಿ ಬೊಂಗಾಳೆ, ಎಂಎಂ ಮಗದುಮ್ ಎಂ ಎಚ್ .ರಾವುತಪ್ಪ ಎಸ್.ಆರ್. ಚೌಗುಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಂಜಿತ್ ಕೊಕ್ಕಾಟೆ ನಿರ್ವಹಿಸಿದರು ಪ್ರಿಯಾಂಕಾ ದೇವನಗೋಳ ಸ್ವಾಗತಿಸಿದರು ಪ್ರೀತಿ ವಡ್ಡರ್ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು ಮಾಲಾಶ್ರೀ ಸಂಗಡಿಗರು ಸ್ವಾಗತಿ ಗೀತೆ ಹಾಡಿದರು ಅಕ್ಷಯ ಪಟ್ಟಣಶೆಟ್ಟಿ ವಂದಿಸಿದರು

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page