“ಶ್ರೀ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದಲ್ಲಿ, ಕಾಯಕಯೋಗಿ ಲಿಂ. ಶ್ರೀ ಸಿದ್ಧಪ್ರಭು ಸ್ವಾಮೀಜಿ ಅವರ 32 ನೇ ಪುಣ್ಯಾರಾಧನೆ ಸಂಪನ್ನ”

ಚಿಕ್ಕೋಡಿ :–

ತಾಲೂಕಿನ ಚಿಂಚಣಿ ಗ್ರಾಮದ ಶ್ರೀ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದಲ್ಲಿ, ಕಾಯಕಯೋಗಿ ಲಿಂ. ಶ್ರೀ ಸಿದ್ಧಪ್ರಭು ಸ್ವಾಮೀಜಿ ಅವರ 32 ನೇ ಪುಣ್ಯತಿಥಿ ಜರುಗಿತು.

ಈಗಿನ ಮಠಾಧೀಶರಾದ ಶ್ರೀ ಶಿವಪ್ರಸಾದ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಲಿಂ.ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮತ್ತು ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಹಿರೀಯ ಸಾಹಿತಿಗಳಾದ ಪ್ರೋ. ಎಸ್. ವಾಯ್. ಹಂಜಿ ಅವರು ಮಾತನಾಡಿ, ಲಿಂ. ಗುರುಗಳು ಸಾಮಾನ್ಯ ಹಂಚಿನ ಮನೆಯಂತಿರುವ ಶ್ರೀ ಮಠವನ್ನು ತಮ್ಮ ಜೀವಿತ ಅವಧಿಯಲ್ಲಿ ಬ್ರಹತ್ತಾಕಾರದ ಮಠವನ್ನು ಕಟ್ಡಿಸಿದ್ದು, ಶ್ರೀ ಮಠದ ಹೊಲಗಳಲ್ಲಿ ಸಾಕಷ್ಟು ಬೆಳೆಗಳನ್ನು ಬೆಳೆಸಿ, ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದ್ದರು.

ಈಗಿನ ಶ್ರೀಗಳಾದ ಶಿವಪ್ರಸಾದ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತಾ ಲಿಂ. ಶ್ರಿ ಸಿದ್ಧಪ್ರಭು ಸ್ವಾಮೀಜಿ ಅವರ ಸಾಧನೆ ಉತ್ತರ ಕರ್ನಾಟಕ್ಕೆ ಮಾದರಿಯಾಗಿದೆ, ಶಿವಯೋಗಿ ಮಂದಿರ ಹಾಗೂ ಜೆ.ಜೆ.ಆಸ್ಪತ್ರೆಯ ಅಭಿವೃದ್ಧಿಗಾಗಿ ತಮ್ಮ ಜೀವನಪೂರ್ತಿ ಕಷ್ಟಪಟ್ಟಿದ್ದ ವಿಷಯ ಇತಿಹಾಸ ಪುಟಗಳನ್ನು ಸೇರಿದೆ, ನಾವೂ ಕೂಡ ಅವರ ದಾರಿಯಲ್ಲಿಯೇ ನಡೆದುಕೊಂಡು ಶ್ರೀ ಮಠವನ್ನು ಮುಗಿಲೆತ್ತರಕ್ಕೆ ಬೆಳೆಸುವೆ, ಭಕ್ತಾದಿಗಳ ಸಹಕಾರ ನಮ್ಮೊಂದಿಗೆ ಇರಲಿ ಎಂದು ಹೇಳಿದರು.

ಪತ್ರಿಕಾ ರಂಗದಲ್ಲಿ ಸಾಧನೆಗೈದು ರಾಜ್ಯ ಪ್ರಶಸ್ತಿ ಪಡೆದಿರುವ, ಸಂಜೀವ ಕಾಂಬಳೆ ಮತ್ತು ಸೌ. ವಿಮಲಾ ಚಿನಕೇಕರ ಇವರನ್ನು ಶ್ರೀ ಗಳು ಶಾಲು ಹೊದಿಸಿ ಪುಷ್ಪ ನೀಡಿ ಸತ್ಕರಿಸಿ ಆಶೀರ್ವಾದ ಮಾಡಿದರು.

ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಧರ್ಭದಲ್ಲಿ ಅಶೋಕ ಪೂಜಾರಿ, ಬಸವರಾಜ ಪಾಟೀಲ, ಚಂದ್ರಕಾಂತ ಹುಕ್ಕೇರಿ, ಅನೀಲ ಪಾಟೀಲ, ಅಕ್ಷಯ ಮುದ್ದಾಪಗೋಳ, ಬಾಬಯ್ಯಾ ಹಿರೇಮಠ, ಅಪ್ಪಾಸಾಹೇಬ ಚೌಗಲಾ, ಗಜಾನನ ಚೌಗಲಾ, ಅಣ್ಣಪ್ಪಾ ಚೌಗಲಾ, ಮೋಹನ ಜೈನಾಪುರೆ, ಸುರೇಶ ಸನದಿ, ನೀಲಕಂಠ ಮಂಗಸೂಳೆ, ತಿಪ್ಪಣ್ಣಾ ಅಪ್ಪಾಜಿಗೋಳ, ಲಕ್ಷ್ಮಣ ಸಾವಿತ್ರಿಗೋಳ, ರಾಜು ರಾಮನಕಟ್ಟಿ, ಶ್ರೀಶೈಲ ಕಿಲ್ಲೆದಾರ, ಪರಗೌಡಾ ಅಮ್ಮಣಗಿ, ಶ್ರೀಧರ ಅಮ್ಮಣಗಿ ಸೇರಿದಂತೆ ಹತ್ತಾರು ಸದ್ಭಕ್ತರು ಉಪಸ್ಥಿತರಿದ್ದರು..

Share this post:

Leave a Reply

Your email address will not be published. Required fields are marked *

You cannot copy content of this page