“ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಮನೆ ಮನೆಗೆ ಅಲ್ಲಮ ಕಾರ್ಯಕ್ರಮ”

ಚಿಕ್ಕೋಡಿ :

ತಾಲುಕಿನ ಚಿಂಚಣಿ ಗ್ರಾಮದ, ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ನೂತನ ಪೀಠಾಧಿಪರಿಗಳಾದ, ಶಿವಪ್ರಸಾದ ಸ್ವಾಮೀಜಿ ಅವರ ನೇತೃತ್ವದಲ್ಲಿ, ಮನೆ ಮನೆಗೆ ಅಲ್ಲಮ ಕಾರ್ಯಕ್ರಮ ಜರುಗುತ್ತಲಿದೆ, ಬರುವ ಮಾರ್ಚ ತಿಂಗಳದಲ್ಲಿ ಶ್ರೀ ಮಠದಲ್ಲಿ ತ್ರೈವಾರ್ಷಿಕ ದಾಸೋಹ ಕಾರ್ಯಕ್ರಮ ಜರುಗಲಿದ್ದು, ಈ ನಿಮಿತ್ತವಾಗಿ ಶ್ರೀ ಗಳು ಚಿಂಚಣಿ ಗ್ರಾಮ ಮತ್ತು ಗ್ರಾಮದ ತೋಟ ಪಟ್ಟಿಗಳಲ್ಲಿ ಸಂಚರಿಸಿ, ಮನೆ ಮನೆಗೆ ತೆರಳಿ, ಅಲ್ಲಮನ ತತ್ವ ಸಿದ್ಧಾಂತಗಳು ಜನರಲ್ಲಿ ತಿಳಿಸುತ್ತಿದ್ದಾರೆ, ಊರಿನ ಹಿರಿಯರು ಹಾಗೂ ಶರಣ ಬಂದುಗಳು ಸಾತ ನೀಡಿದ್ದಾರೆ‌.

ಸಂಧರ್ಭದಲ್ಲಿ ಚಿಂಚಣಿ ಪೊಲೀಸ್ ಪಾಟೀಲ ಬಸವರಾಜ ಪಾಟೀಲ ಮಾತನಾಡಿ, ನಮ್ಮ ಊರಿನ ಶ್ರೀ ಮಠವು ಶತ ಶತಮಾನಗಳಿಂದ ಭಕ್ತರ ಪಾಲಿಗೆ ಕಾಯಕಲ್ಪವಾಗಿದೆ, ಹಿರಿಯರು ನಡೆದುಕೊಂಡು ದಾರಿಯಲ್ಲಿ ಎಲ್ಲ ಸದ್ಭಕ್ತರು ಸೇರಿ ದಾಸೋಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸೋಣ, ಸರ್ವ ಭಕ್ತಾಧಿಗಳು ತನು ಮನ ಧನದಿಂದ ಶ್ರೀ ಗಳೊಂದಿಗೆ ಕೈಜೋಡಿಸಿ ಅಲ್ಲಮನ ಪ್ರೀತಿಗೆ ಪಾತ್ರರಾಗಬೇಕೆಂದು ಹೇಳಿದರು.

ಮತ್ತೋರ್ವ ಭಕ್ತರಾದ ಪರಗೌಡ ಅಮ್ಮಣಗಿ ಮಾತನಾಡಿ, ಶ್ರೀ ಮಠದ ನೂತನ ಪೀಠಾಧ್ಯಕ್ಷರಾದ ಶಿವಪ್ರಸಾದ ಸ್ವಾಮೀಜಿ ಅವರು ಯಾವಾಗಲೂ ಗ್ರಾಮದ ಒಳಿತಿಗಾಗಿ ಹಗಲಿರಳು ಪ್ರಯತ್ನಿಸುತ್ತಿದ್ದಾರೆ, ಎಲ್ಲ ಭಕ್ತರು ಅವರ ಬೆನ್ನಿಗೆ ನಿಂತು, ಗ್ರಾಮದ ಶ್ರೀ ಮಠದ ಹೆಸರನ್ನು ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗುವಂತೆ ಮಾಡಲು ಸಹಕರಿಸಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ದೀಪಕ ಮುದ್ದಪ್ಪಗೋಳ, ಚಂದ್ರಕಾಂತ ಹುಕ್ಕೇರಿ, ಲಕ್ಷ್ಮಣ ಡಂಗೇರ, ನರಸು ಕಾಳಪ್ಪಗೋಳ, ಮಲ್ಲೇಶ ಮೊಳವಾಡೆ, ಅಪ್ಪಾಸಾಹೇಬ ಚೌಗಲಾ, ಶಿವಾನಂದ ಚೌಗಲಾ, ಸಂಜು ಪರೀಟ, ಅಭಯ ಪಾಟೀಲ, ಡಾ‌. ಸಚೀನ ಪಾಟೀಲ, ಸುನೀಲ ಪೂಜಾರಿ, ಶ್ರೀದೇವಿ ಕಾಂಬಳೆ, ಓಂಕಾರ ಕಾಂಬಳೆ, ಆಶ್ವಿನಿ ಕಾಂಬಳೆ, ಸಂತೋಷ ನೇರ್ಲೆ, ಸೌರಭ ಪಾಟೀಲ, ಚೇತನ ಜಗದಾಳೆ, ಪ್ರಜ್ವಲ ನಾಯಿಕ, ಅನೀಲ ಪಾಟೀಲ, ಮನೋಜ ಕುಂಬಾರ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page