“ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ೩೭ ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗ್ರತಿ ಮಾಸಾಚರಣೆ ಕಾರ್ಯಕ್ರಮ”

ಚಿಕೋಡಿ :–

ಜಗತ್ತಿನಲ್ಲಿ ದಿನಾಲೂ ಸಾವಿರಾರು ಯುವಕರು ಮತ್ತು ಯುವತಿಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದರೆ. ಇದಕ್ಕೆ ಕಾರಣ ರಸ್ತೆ ನಿಯಮಾವಳಿ ಯನ್ನು ಪಾಲಿಸದೆಯಿರುವದು.ಕಾರಣ ಎಲ್ಲರು ರಸ್ತೆ ಸಾರಿಗೆ ಇಲಾಖೆಯ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವದರಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಪ್ರಾಧ್ಯಾಪಕ್ ಎನ್ ವ್ಹಿ ಶ್ರೀಗಾಂವಕರ್ ಅವರು ಹೇಳಿದರು
ಚಿಕೋಡಿಯ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆ, ತಾಲೂಕಾ ಕಾನೂನು ಸೇವಾ ಸಮಿತಿ, ಚೌಸನ್ ಪೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಮಹಾವಿದ್ಯಾಲಯದ್ ಸಭಾಭವನದಲ್ಲಿ ಆಯೋಜಿಸಿದ ೩೭ ನೇ ರಾಷ್ಟ್ರೀಯ್ ರಸ್ತೆ ಸುರಕ್ಷಿತ್ ಜಾಗೃತಿ ಮಾಸಾಚರಣೆ ಮತ್ತು ಸಮಾರೋಪ ಸಮಾರಂಭ್ ಕಾರ್ಯಕ್ರಮ್ ದಲ್ಲಿ ವಿಶೇಷ ಸಂಪನ್ಮೂಲ ವಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಚಿಕ್ಕೋಡಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಂಜುನಾಥ್ ಶಿರಾಳೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ದ್ವಿಚಕ್ರ ವಾಹನ ಸವಾರರು ಹಾಗೂ ಕಾರಿನಲ್ಲಿ ಚಲಿಸುವರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕೆಂದು ಕರೆ ನೀಡಿದರು.
ಪ್ರಾಧ್ಯಾಪಕರಾದ ಡಾಕ್ಟರ್ ಎನ್ಎಸ್ ಶಿಂದೆ ಮಾತನಾಡಿ ರಸ್ತೆ ಸುರಕ್ಷತೆ ಜೀವನದಲ್ಲಿ ಅತ್ಯಂತ ಮಹತ್ವದ್ದು ಎಂದು ತಿಳಿಸಿ ನಿಮ್ಮ ಜೀವ ಉಳಿಸಿ ಇತರರ ಜೀವನಕ್ಕೂ ಆದರ್ಶವಾಗಿರಿ ಎಂದರು. ನ್ಯಾಯವಾದಿಗಳಾದ ಎಂ ಬಿ ಪಾಟೀಲ್ ಹಾಗೂ ಬಸವರಾಜ್ ಎಪಿಪಿ ಇವರು ಸಂಚಾರ ನಿಯಮ ಉಲ್ಲಂಘನೆಯ ಕಾನೂನು ಪರಿಣಾಮಗಳ ಕುರಿತು ಮಾಹಿತಿ ನೀಡಿದರು
ಚೌಸನ್ ಪೌಂಡೇಶನದ ಅಧ್ಯಕ್ಷರಾದ್ ಸುರೇಂದ್ರನಾಥ ಟಿ ಚೌಗುಲೆ, ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಟಿ ಚೌಗುಲೆ , ಹಿರಿಯ ಮೋಟರ್ ವಾಹನ ನಿರೀಕ್ಷಕರಾದ ಮಹೇಶ್ ಹನುಮಸೆಟ್ ಅತಿಥಿಗಳಾಗಿ ಭಾಗವಹಿಸಿದ್ದರು ಪ್ರಾಂಶುಪಾಲರಾದ ಡಾ. ತನುಜಾ ಎಸ ಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
, ಡ್ರೈವಿಂಗ್ ಮೋಟರ್ ಸ್ಕೂಲ್ ಉಪಾಧ್ಯಕ್ಷರಾದ ನಿಯಾಜ್ ಬಡೇಖಾನ ಇವರು ಮಾಸಾಚಾರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಪ್ರತಿಜ್ಞಾವಿಧಿ ಭೋದಿಸಿದರು, ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಎಸ ಎಸ ಹಲಕಿ ,ರಾವುತ್ ಎಂ ಎಚ, , ಪ್ರಶಾಂತ್ ಪತ್ತಾರ, ಕೃಷ್ಣಾ ಆರಗೆ, ಸಂದೀಪ್ ಕಾಂಬಳೆ ಮತ್ತು ಸಾರಿಗೆ ಇಲಾಖೆಯ್ ಸಿಬಂದಿ ವರ್ಗದರು, ಬಿಎಡ್ ಪ್ರಶಿಕ್ಷಣಾರ್ಥಿಗಳು, ಶಾಲೆಯ ವಿಧ್ಯಾರ್ಥಿಗಳು ಉಪಸ್ಥಿತಿದರು. ಬನಪ್ಪಾ ಚುಗುಲಾ ಕಾರ್ಯಕ್ರಮ ವನ್ನ
ನಿರೂಪಿಸಿದರು, ಪರುಷರಾಮ ಕುರಬೇಟ ವಂದಿಸಿದರು. ಅನಿಲ್ ಧನವಾಡೆ ಪ್ರಾರ್ಥಿಸಿದರು. ಅಂಬವಗೋಳ ಸ್ವಾಗತಿಸಿದರು

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page