“ಬೆಳಗಾವಿ ಡಿ.ಸಿ.ಸಿ ಬ್ಯಾಂಕ್ ರಾಜ್ಯದಲ್ಲೇ ನಂ 01 ಮಾಡುವ ಗುರಿ” : ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ

ಬೆಳಗಾವಿ :–

ಬೆಳಗಾವಿಯ ಸಿ.ಪಿ.ಎಡ್. ಮೈದಾನದಲ್ಲಿ ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.,ಬೆಳಗಾವಿ ವತಿಯಿಂದ ಆಯೋಜಿಸಲಾದ ನೂತನ ವಿವಿಧ ಯೋಜನೆಗಳ ಸಮಾರಂಭವನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಉದ್ಘಾಟಿಸಿ,ಚಾಲನೆ ನೀಡಿ ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಜೀವನಾಡಿಯಾಗಿರುವ ಬಿ.ಡಿ.ಸಿ.ಸಿ.ಬ್ಯಾಂಕ್,ಈಗ ತನ್ನ ಪ್ರಗತಿಯ ಪಥದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಎಲ್ಲ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ 1 ಲಕ್ಷ ದವರಿಗೆ ಆರೋಗ್ಯ ವಿಮೆ,ಸಿಬ್ಬಂದಿಗಳಿಗೆ 5 ಲಕ್ಷ ವರೆಗೆ ಜೀವ ವಿಮೆ ಮತ್ತು ಅಪಘಾತ ವಿಮೆ 10 ಲಕ್ಷ ರೂ ನೀಡಲಾಗುವುದು.ಕೃಷಿಯೇತರ ಸಾಲಗಳನ್ನು PKPS ಗಳ ರಿಯಾಯತಿ ಬಡ್ಡಿ ದರದಲ್ಲಿ ವಿತರಣೆ,ಬ್ಯಾಂಕಿನ ವಿವಿಧ ಹೊಸ ಯೋಜನೆಗಳಿಗೆ ಅಧಿಕೃತ ಚಾಲನೆ ನೀಡಲಾಗಿದ್ದು,ರೈತರು,ಸದಸ್ಯರು,ಸಿಬ್ಬಂದಿ ವರ್ಗದವರು ಹಾಗೂ ಸಾಮಾನ್ಯ ಜನರಿಗೆ ಇನ್ನಷ್ಟು ಆರ್ಥಿಕ ಶಕ್ತಿಯನ್ನು ನೀಡುವ ಮಹತ್ವದ ಹೆಜ್ಜೆಯಾಗಿದೆ.

ಈ ಸಭೆಯಲ್ಲಿ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ,ಬ್ಯಾಂಕ್ ನಿರ್ದೇಶಕರಾದ ಶ್ರೀ ಅರವಿಂದ ಪಾಟೀಲ,ಶ್ರೀ ಅಪಾಸಾಹೇಬ ಕುಲಗೂಡೆ,ಶ್ರೀ ನೀಲಕಂಠ ಕಪ್ಪಲಗುದ್ದಿ,ಶ್ರೀ ಗಣೇಶ ಹುಕ್ಕೇರಿ,ಶ್ರೀ ಚನ್ನರಾಜ ಹಟ್ಟಿಹೊಳಿ, ಶ್ರೀ ವಿರುಪಾಕ್ಷಿ ಮಾಮನಿ,ಮಲ್ಲಪ್ಪ ಯಾದವಾಡ, ನಾನಾಸಾಹೇಬ ಪಾಟೀಲ, ರಾಹುಲ ಜಾರಕಿಹೊಳಿ,ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಹಕಾರದ ಮೂಲಕ ಅಭಿವೃದ್ಧಿ — ನಮ್ಮ ಸಂಕಲ್ಪ, ನಮ್ಮ ಬದ್ಧತೆ.

Share this post:

Leave a Reply

Your email address will not be published. Required fields are marked *

You cannot copy content of this page