ಬೆಂಗಳೂರು :–
ಬಿಪಿಎಲ್( BPL) ಪಡಿತರದಾರರಿಗೆ ಹೆಚ್ಚುವರಿ ೫ ಕೆಜಿ ಅಕ್ಕಿಯ ಬದಲು ‘ಇಂದಿರಾ ಆಹಾರ ಕಿಟ್’ ನೀಡುವ ಯೋಜನೆಯ ಟೆಂಡರ್ ೮ ತಿಂಗಳಿಂದ ನನೆಗುದಿಗೆ ಬಿದ್ದಿದ್ದು, ಈ ಯೋಜನೆ ಕೈಬಿಟ್ಟು ೧೦ ಕೆಜಿ ಅಕ್ಕಿಯನ್ನೇ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇಂದಿರಾ ಆಹಾರ ಕಿಟ್‌ನಲ್ಲಿ ಪಡಿತರದಾರರಿಗೆ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ನೀಡುವ ಯೋಜನೆಯನ್ನು ಸರ್ಕಾರ ಈ ಹಿಂದೆ ಪ್ರಸ್ತಾಪಿಸಿತ್ತು. ಇದಕ್ಕೆ ಮಾಸಿಕ ₹೫೫೦ ಕೋಟಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಿದೆ.





