ಬೆಂಗಳೂರು :–
ಬಿಸಿನೆಸ್ ಟುಡೇ ವರದಿಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್(RBI) ಆರಂಭಿಕ ಹಂತ ಹಂತವಾಗಿ ₹೧೦ ಮತ್ತು ₹೨೦ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಿದೆ.
ಗಮನಾರ್ಹವಾಗಿ, ಆರ್‌ಬಿಐ ಕಾಗದದ ಬದಲಿಗೆ ಪಾಲಿಮರ್ ನೋಟುಗಳ ಮುದ್ರಿಸಲಿದ್ದು, ಅವು ನೀರು, ತೇವಾಂಶ ಮತ್ತು ಧೂಳಿಗೆ ನಿರೋಧಕವಾಗಿರುತ್ತವೆ ಹಾಗೂ ಸುಲಭವಾಗಿ ಹರಿದು ಹೋಗುವುದಿಲ್ಲ.
ಪ್ಲಾಸ್ಟಿಕ್ ನೋಟುಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಪಾಲುದಾರನನ್ನು ಹುಡುಕಲಾಗುತ್ತಿದೆ ಎಂದು ವರದಿಯಾಗಿದೆ.





