ಹೊಸದೆಹಲಿ :–
ರಾಜಸ್ಥಾನ್ ರಾಜ್ಯದ ಜೈಪುರದ ಎಸ್‌ಎಂಎಸ್ ಆಸ್ಪತ್ರೆಯ ವೈದ್ಯರು ನಾಲ್ಕು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ೨೯ ವರ್ಷದ ವ್ಯಕ್ತಿಯ ಕತ್ತರಿಸಿದ ಖಾಸಗಿ ಭಾಗಗಳನ್ನು ಮತ್ತೆ ಜೋಡಿಸಿದ್ದಾರೆ.
ಗೆಳತಿಯಿಂದ ಹಲ್ಲೆಗೊಳಗಾದ ಆ ವ್ಯಕ್ತಿ ಸುಮಾರು ೪೦ ದಿನಗಳ ಚಿಕಿತ್ಸೆಯ ನಂತರ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ.
ಘಟನೆ ನಡೆದ ೪ ಗಂಟೆಗಳಲ್ಲಿ ಅವರನ್ನು ಆಸ್ಪತ್ರೆಗೆ ತರಲಾಯಿತು. ಆತನ ಜನನಾಂಗಗಳು ಬಹುತೇಕ ಸಂಪೂರ್ಣವಾಗಿ ಕತ್ತರಿಸಿಹೋಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.





