ಬೆಂಗಳೂರು :–
ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದ ತಾಜ್‌ಗಂಜ್ ಕೊಲೆ ಪ್ರಕರಣದಲ್ಲಿ, ನ್ಯಾಯಾಲಯವು ಪತ್ನಿ, ಆಕೆಯ ಪ್ರಿಯಕರ ಮತ್ತು ಆಕೆಯ ಸಹೋದರನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹಿಳೆ ಪತಿಯನ್ನು ಕೊಂದು ಆತನ ದೇಹವನ್ನು ಚೀಲದಲ್ಲಿ ತುಂಬಿ ಎಸೆದಿದ್ದಳು. ಮೃತನ ೧೦ ವರ್ಷದ ಮಗಳ ಸಾಕ್ಷ್ಯ ಪ್ರಕರಣದಲ್ಲಿ ನಿರ್ಣಾಯಕವಾಗಿದೆ.
ಕೋಣೆಯ ಗೋಡೆಗಳು ಮತ್ತು ನೆಲದ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಆ ಮಹಿಳೆ ಮತ್ತು ಆಕೆಯ ಪ್ರಿಯಕರ ಒಂದು ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.





