ಬೆಂಗಳೂರು :–
ಬಿಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ, ಎನ್ ಪಿ ಸಿ ಐ (NPCI) ಟ್ಯಾಪ್-ಟು-ಪೇ ವೈಶಿಷ್ಟ್ಯದ ಪರಿಚಯಿಸಲಿದ್ದು, ಇದು UPI ಬಳಕೆದಾರರಿಗೆ ಇಂಟರ್ನೆಟ್ ಇಲ್ಲದೆ ₹2,000 ವರೆಗೆ ಹಣ ಪಾವತಿಸಲು ಅನುವು ಮಾಡಿಕೊಡುತ್ತದೆ.
ವರದಿಗಳ ಪ್ರಕಾರ ಗ್ರಾಹಕರು ಮೊದಲು ಇಂಟರ್ನೆಟ್ ಮೂಲಕ UPI ಲೈಟ್ ವ್ಯಾಲೆಟ್‌ಗೆ ಹಣವನ್ನು ಲೋಡ್ ಮಾಡಬೇಕು, ಇದರಿಂದಾಗಿ UPI ಪಿನ್ ನಮೂದಿಸದೆಯೇ ಆಫ್‌ಲೈನ್ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
ಈ ವೈಶಿಷ್ಟ್ಯವು ಇಂಟರ್ನೆಟ್ ಲಭ್ಯ ಇಲ್ಲದೆ ಇರುವ ವಿಮಾನಗಳು ಹಾಗೂ ಭೂಗತ ರೈಲು ನೆಟ್‌ವರ್ಕ್‌ಗಳಲ್ಲಿ ಉಪಯುಕ್ತವಾಗಿರುತ್ತದೆ.





