ಬೆಂಗಳೂರು :–
ಉತ್ತರ ಪ್ರದೇಶ ರಾಜ್ಯದ ವಾರಣಾಸಿಯಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ೫ ವರ್ಷದ ಬಾಲಕ ಪ್ಯಾಂಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ನಂತರ,
ಆತನ ಖಾಸಗಿ ಭಾಗಗಳನ್ನು ಬಿಸಿ ಚಾಕುವಿನಿಂದ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಗುವಿನ ಕುಟುಂಬ ಪೊಲೀಸರಿಗೆ ದೂರು ನೀಡಿದೆ.
ಮಗು ಟಾಯ್ಲೆಟ್ ಬಳಸಲು ಅನುಮತಿ ಕೋರಿತ್ತು, ಆದರೆ ಶಿಕ್ಷಕಿ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೆ ಪ್ಯಾಂಟ್‌ನಲ್ಲಿ ಮೂತ್ರ ವಿಸರ್ಜಿಸಿದರೆ ಇನ್ನೂ ಕೆಟ್ಟ ಶಿಕ್ಷೆ ವಿಧಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.





