ಬೆಂಗಳೂರು :–
ಸಾಮಾಜಿಕ ಮಾಧ್ಯಮದಲ್ಲಿ ಹೇಳುವಂತೆ E20 ಪೆಟ್ರೋಲ್‌ನಲ್ಲಿ ತೇವಾಂಶ ಮತ್ತು ೫೦೦ ppm ಕ್ಲೋರೈಡ್ ಇದೆ ಎಂಬುದು ಕೇವಲ ವದಂತಿ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಹೇಳಿವೆ.
ದೇಶಾದ್ಯಂತ ೧೦೦೦ ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಸಿದಾಗ ೦-೩ ppm ಕ್ಲೋರೈಡ್ ಮಟ್ಟಗಳು ಕಂಡುಬಂದಿವೆ. ಪರೀಕ್ಷೆಗಳಲ್ಲಿ ೯೦,೦೦೦ ಪಂಪ್‌ಗಳ ಟ್ಯಾಂಕ್‌ಗಳಲ್ಲಿ ನೀರು ಅಥವಾ ತೇವಾಂಶ ಕಂಡುಬಂದಿಲ್ಲ,
E20 ಇಂಧನವು ಸುರಕ್ಷತ ಮತ್ತು ಬಳಕೆಗೆ ಅನುಗುಣವಾಗಿದೆ ಎಂದು ಕಂಡುಬಂದಿದೆ.





