ಬೆಂಗಳೂರು :–
೭೦ ವರ್ಷದೊಳಗಿನ ರಾಜ್ಯ ಸರ್ಕಾರಿ ಪಿಂಚಣಿದಾರರಿಗಾಗಿ ‘ಸಂಧ್ಯಾ ಕಿರಣ’ ಎಂಬ ವಂತಿಕೆ ಆಧಾರಿತ ನಗದು ರಹಿತ ಆರೋಗ್ಯ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯಡಿ ಅರ್ಹ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ₹೫ ಲಕ್ಷದವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಸಿಗಲಿದೆ. ನಿಯಮಿತ ಪಿಂಚಣಿದಾರರು ಮೂಲ ಪಿಂಚಣಿಯ ಶೇ.೧.೨೫ ಮತ್ತು ಕುಟುಂಬ ಪಿಂಚಣಿದಾರರು ಶೇ.೦.೭೫ರಷ್ಟು ವಂತಿಗೆ ಪಾವತಿಸಬೇಕಾಗುತ್ತದೆ.





