ಬೆಳಗಾವಿ :–
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್), 80ನೇ ಸ್ವಾತಂತ್ರೋತ್ಸವದ ಅಂಗವಾಗಿ ₹೧ಕ್ಕೆ ಹೊಸ ಸಿಮ್ ಕಾರ್ಡ್ ನೀಡುತ್ತಿದೆ.
ಆಗಸ್ಟ್ ೧೨ರಿಂದ ಆರಂಭವಾಗಿರುವ ಈ ಕೊಡುಗೆಯು ಸೆಪ್ಟೆಂಬರ್ ೧೨ರವರೆಗೆ ಲಭ್ಯವಿರಲಿದೆ. ಈ ಕೊಡುಗೆಯಡಿ ೨೪ ದಿನಗಳ ಅವಧಿಗೆ ಅನಿಯಮಿತ ಕರೆ, ಪ್ರತಿದಿನ ೧ ಜಿಬಿ ಡೇಟಾ ಹಾಗೂ ೧೦೦ ಎಸ್‌ಎಂಎಸ್‌ಗಳು ಲಭ್ಯವಾಗಲಿವೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.
ಇದರೊಂದಿಗೆ, ₹೨,೩೯೯ ವಾರ್ಷಿಕ ಪ್ಲಾನ್ ಮೇಲೆ ೪೧೨ ದಿನಗಳ ವ್ಯಾಲಿಡಿಟಿ ನೀಡುವುದಾಗಿ BSNL ಘೋಷಿಸಿದೆ.





