ಬೆಂಗಳೂರು :–
ಉತ್ತರ ಪ್ರದೇಶv ರಾಜ್ಯದ ಜಲೌನ್‌ನಲ್ಲಿ ಪ್ರೇಯಸಿಯ ಭೇಟಿಗೆ ಬಂದು ಮೂರು ದಿನಗಳ ಕಾಲ ಟ್ರಂಕ್‌ನಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯನ್ನು ಮಹಿಳೆಯ ಕುಟುಂಬಸ್ಥರು ಥಳಿಸಿದ್ದಾರೆ.
ಮಹಿಳೆಯ ಪತಿ ೨ ವರ್ಷಗಳ ಹಿಂದೆ ಮೃತಪಟ್ಟಿದ್ದು, ಆಕೆ ಮನೆಯಲ್ಲಿ ಒಂಟಿಯಾಗಿ ಇರುವಾಗ ಪ್ರಿಯಕರ ಬಂದಿದ್ದಾನೆ. ಇದೇ ವೇಳೆ ಕುಟುಂಬಸ್ಥರು ಮನೆಗೆ ಬಂದಿದ್ದು,
ಆತ ಟ್ರಂಕ್‌ನಲ್ಲಿ ಅಡಗಿಕೊಂಡಿದ್ದಾನೆ. ಮೂರು ದಿನಗಳ ಬಳಿಕ ಟ್ರಂಕ್‌ನಿಂದ ಬಂದ ಶಬ್ದದಿಂದ ಅನುಮಾನಗೊಂಡು ಮನೆಯವರು ಅದನ್ನು ತೆರೆದಾಗ ಪ್ರಿಯಕರ ಪತ್ತೆಯಾಗಿದ್ದಾನೆ.





