ಯತ್ನಾಳ್ ತಮ್ಮ ಬಚ್ಚಲು ಮತ್ತು ಹರಕು ಬಾಯಿಂದಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ : ವೀರತಿಶಾನಂದ ಸ್ವಾಮೀಜಿ

ವಿಜಯಪುರ :–

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ವಿಜಯಪುರದ ಮುಸಲ್ಮಾನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೆಲ ಮಠಾಧೀಶರು ಸೀಯರ್ಸ್ ಕೂಡ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತಾಡಿದ ಮನಗೂಳಿ ಮಠದ ವೀರತಿಶಾನಂದ ಸ್ವಾಮೀಜಿ ಅವರು, ಪ್ರವಾದಿಯವರ ಬಗ್ಗೆ ಯತ್ನಾಳ್ ಅವಹೇಳನಕಾರಿಯಾಗಿ ಮಾತಾಡಿದ್ದು ಅಕ್ಷಮ್ಯ ಅಪರಾಧ,

ಚಿಕ್ಕ ವಯಸ್ಸಿನಲ್ಲೇ ಯತ್ನಾಳ್ ಅವರು ಕೇಂದ್ರದಲ್ಲಿ ಸಚಿವರಾದಾಗ, ಮುಂದೊಂದು ದಿನ ಪ್ರಧಾನ ಮಂತ್ರಿ ಅಗುತ್ತಾರೆ ಎಂದು ಭಾವಿಸಿದ್ದೆವು,

ನಂತರ ಅವರ ರಾಜ್ಯ ರಾಜಕಾರಣಕ್ಕೆ ಬಂದು ತಾನು ಮುಖ್ಯಮಂತ್ರಿಯಾಗಲಿದ್ದೇನೆ ಎಂದಾಗ ಪಂಚಮಸಾಲಿ ಸಮಾಜದ ನಾಯಕರೊಬ್ದರು ಮುಖ್ಯಮಂತ್ರಿಯಾಗುತ್ತಾರೆ ಅಂತ ಸಂಭ್ರಮಿಸಿದ್ದೆವು,

ಅದರೆ ಯತ್ನಾಳ್ ತಮ್ಮ ಬಚ್ಚಲು ಮತ್ತು ಹರಕು ಬಾಯಿಂದಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

Share this post:

Leave a Reply

Your email address will not be published. Required fields are marked *