ಬೆಂಗಳೂರು :–
ಒಡಿಶಾದ ಬಾಲಸೋರ್‌ನ ನಾನಿ ಗೋಪಾಲ್ ಎಂಬ ಮೀನುಗಾರನ ಬಲೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ತಿಲಿಯಾ ಭೋಲಾ ಮೀನುಗಳು ಸಿಲುಕಿವೆ.
ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ನಾನಿ ಗೋಪಾಲ್ ಹಿಡಿದ 29 ತಿಲಿಯಾ ಭೋಲಾ ಮೀನುಗಳು ಒಟ್ಟು ₹33 ಲಕ್ಷಕ್ಕೆ ಮಾರಾಟವಾಗಿವೆ ಎಂದು ವರದಿ.
ತಿಲಿಯಾ ಭೋಲಾ ಮೀನನ್ನು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು, ಇದರಲ್ಲಿ ಔಷಧೀಯ ಗುಣಗಳೂ ಇವೆ ಎಂದು ತಿಳಿಯಲ್ಪಟ್ಟಿದೆ.