“ಯೋಗಾಸನವು ನಿರಂತರ ಅಭ್ಯಾಸದಿಂದ ವ್ಯಕ್ತಿಯ ಒತ್ತಡವನ್ನು ನಿವಾರಿಸಬಹುದು” : ಕೆ ಎನ್ ವಣ್ಣೊರ

ಚಿಕ್ಕೋಡಿ :–

ತಾಲ್ಲೂಕಿನ ಉಮರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ನಾಳ ಗ್ರಾಮದ  ಅಮೃತ ಸರೋವರ ಕೆರೆ ಅಂಗಳದಲ್ಲಿ ಸಸಿ ನೆಡುವುದು, ಸ್ವಚ್ಚತಾ ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸನ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

 ಗ್ರಾ ಪಂ ಪಿಡಿಒ ರವರಾದ ಸಂಜೇಯ  ಚನ್ನವರ  ವಿವಿಧ ಯೋಗಾಸನಗಳಾದ ಸೂರ್ಯ ನಮಸ್ಕಾರ, ಪ್ರಾಣಾಯಾಮ, ವ್ಯಾಯಾಮ, ಹೇಳಿಕೊಟ್ಟರು.

 ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎನ್ ವಣ್ಣೂರ ಅವರು  ಮಾತನಾಡಿ ಯೋಗಾಸನವು ನಿರಂತರ ಅಭ್ಯಾಸದಿಂದ ವ್ಯಕ್ತಿಯ ಒತ್ತಡವನ್ನು ನಿವಾರಿಸಬಹುದು ದೇಹ ಮತ್ತು ಇಂದ್ರಿಯಗಳ ನಿಯಂತ್ರಣದೊಂದಿಗೆ ಮಾನವ ಪ್ರಜ್ಞೆಯನ್ನು ಪರಿವರ್ತಿಸುತ್ತದೆ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿಯ ಜೊತೆಗೆ ಸಂಪರ್ಕವನ್ನು ಕಲ್ಪಿಸುವ ಮೂಲಕ ನಮ್ಮ ನೈಜಕತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರಾದ  (ನರೇಗಾ) ಶಿವಾನಂದ ಶಿರಗಾಂವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮನ ಪೂಜೇರಿ ಸಂಯೋಜಕರಾದ ರಂಜೀತ ಕಾರ್ಣಿಕ ಕಾರ್ಯದರ್ಶಿಯಾದ ದುಂಡಾಪ್ಪಾ ಬಜ್ಜನಾಯಿಕ ಬಿ ಎಪ್ ಟಿ      ವಿಠ್ಠಲ ರಕ್ಷಿ   ಜಿ ಕೆ ಎಂ ಶಿಲ್ಪಾ ಮಗದುಮ್ಮ     ಪಂ ಸರ್ವ ಸದಸ್ಯರರು ಹಾಗೂ  ಎಲ್ಲಾ ಗ್ರಾಪಂ ಸಿಬ್ಬಂದಿ ಹಾಜರಿದ್ದರು

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page